ಬಜಪೆ: ಕಟೀಲು - ಬಜಪೆ ರಾಜ್ಯ ಹೆದ್ದಾರಿಯ ಎಕ್ಕಾರು ಶಾಲಾ ಬಳಿ ಹೆದ್ದಾರಿಯ ಅಂಚಿನಲ್ಲಿಬೃಹತ್ ಗಾತ್ರದ ಹುಲ್ಲುಗಳು ಬೆಳೆದು ನಿಂತಿದ್ದು,ರಸ್ತೆಯಂಚಿನಲ್ಲಿ ನಡೆದು ಕೊಂಡು ಹೋಗುವಂತಹ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಬಹಳಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.
ಹೆದ್ದಾರಿಯ ಅಂಚಿನ ಉದ್ದಕ್ಕೂ ಬೆಳೆದಂತಹ ಬೃಹತ್ ಗಾತ್ರದ ಹುಲ್ಲಿನಿಂದಾಗಿ ರಸ್ತೆಯಂಚಿನಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಹೆದ್ದಾರಿಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತದೆ.ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಾಗುವಂತಹ ಹೆದ್ದಾರಿ ಇದಾಗಿದೆ.ಇದರಿಂದಾಗಿ ಬಹಳಷ್ಟು ಅಪಾಯಕಾರಿ ಸ್ಥಿತಿಯಲ್ಲಿ ಸಾರ್ವಜನಿಕರು ಹೆದ್ದಾರಿಯಲ್ಲಿಯೇ ನಡೆದುಕೊಂಡು ಹೋಗಬೇಕು.
ಹೆದ್ದಾರಿಯ ಅಂಚಿನಲ್ಲಿನ ಹುಲ್ಲುಗಳು ಬೃಹತ್ ಗಾತ್ರದಲ್ಲಿ ಬೆಳೆದು ನಿಂತಿದ್ದರೂ ತೆರವು ಗೊಳಿಸುವ ಕಾರ್ಯಕ್ಕೆ ಹೆದ್ದಾರಿ ಇಲಾಖೆ ಮೌನವಹಿಸಿದೆ. ಈ ಬಗ್ಗೆ ಹೆದ್ದಾರಿ ಇಲಾಖೆ ಹೆದ್ದಾರಿಯಂಚಿನಲ್ಲಿನ ಹುಲ್ಲುಗಳನ್ನು ತೆರವುಗೊಳಿಸಿ,ಸಾರ್ವಜನಿಕರ ದಿನನಿತ್ಯದ ಓಡಾಟಕ್ಕೆ ಅನುವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
26/08/2022 08:20 pm