ಮೂಡುಬಿದಿರೆ : ತುಳು ಲಿಪಿ, ಭಾಷೆ ಕಲಿಕೆಗೆ ಪಿಯು ಅಂತದಲ್ಲೂ ಅವಕಾಶ ಕಲ್ಪಿಸಲು ಸತತ ಹೋರಾಟ ನಡೆಸಲಾಗುತ್ತಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಈ ಹಂತದಲ್ಲೂ ನಾವು ಯಶಸ್ವಿಯಾಗಲು ಸಾಧ್ಯ ಕರ್ನಾಟಕ ಸರ್ಕಾರದ ಪ್ರಯತ್ನದಿಂದಾಗಿ ರಾಜ್ಯ, ರಾಷ್ಟ್ರ ಮನ್ನಣೆ ಲಭಿಸಿದೆ.
ತುಳು ಭವನ ನಿರ್ಮಾಣಕ್ಕಾಗಿ ಯಡಿಯೂರಪ್ಪ ಸರ್ಕಾರ 2ಕೋಟಿ ನೀಡಿದ್ದರೆ ಬೊಮ್ಮಾಯಿ ಸರ್ಕಾರ 4,4 ಕೋಟಿ ಒದಗಿಸಿದ್ದು, ಅಕ್ಟೋಬರ್ 8ರಂದು ಬಹುನಿರೀಕ್ಷೆಯ ತುಳುಭವನ ಉದ್ಘಾಟನೆಗೊಳ್ಳಲಿದೆ' ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ, ಕತ್ತಲ್ ಸಾರ್ ಹೇಳಿದರು.
ಶ್ರೀ ಮಹಾವೀರ ಕಾಲೇಜು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಇವುಗಳ ಸಹಭಾಗಿತ್ವದಲ್ಲಿ ಮಹಾವೀರ ಕಾಲೇಜಿ ನಲ್ಲಿ ಮಂಗಳವಾರ ನಡೆದ ತುಳುನಾಡ ಸಿರಿ-2022 ತುಳು ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ ಮತ್ತು ತುಳು ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ, ಮಂಗಳೂರು ವಿ.ವಿ. ನಿವೃತ್ತ ಉಪಕುಲಸಚಿವ ಡಾ. ಪ್ರಭಾಕರ ನೀರುಮಾರ್ಗ, ಅವರ ೨೮ನೇ ಕೃತಿ ತುಳು ಬದುಕು" ಪುಸ್ತಕವನ್ನು ಮಾಜಿ ಸಚಿವ ಹಾಗೂ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಬಿಡುಗಡೆಗೊಳಿಸಿದರು.
ಹಳೆ ವಿದ್ಯಾರ್ಥಿ, ದ.ಕ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಕೃತಿಕಾರ ಡಾ. ಪ್ರಭಾಕರ ನೀರುಮಾರ್ಗ, ಆಳ್ವಾಸ್ ನ ಅಧ್ಯಾಪಕ ಡಾ. ಯೋಗೀಶ್ "ಕೈರೋಡಿ ಕೃತಿಯ ವಿಶೇಷ ಕುರಿತು ಮಾತನಾಡಿದರು. ಚಿತ್ರ, ನಿರ್ಮಾಪಕ ತಮ್ಮಣ ಶೆಟ್ಟಿ ಅವರು ತುಳು ಸಂಸ್ಕೃತಿಯನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿ, 'ದೈವಾರಾಧನೆ' ಕುರಿತು ಮಾತನಾಡಿದರು.
''ತುಳುನಾಡಿನ, ಆಹಾರ ಪದ್ಧತಿಯ ಬಗ್ಗೆ ಹಳೆ ವಿದ್ಯಾರ್ಥಿ, ಪತ್ರಕರ್ತ ಧನಂಜಯ ಮೂಡುಬಿದಿರೆ ವಿಚಾರ ಪ್ರಸ್ತುತಪಡಿಸಿದರು.
ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ., ಪದವಿ ಕಾಲೇಗಿನ ಪ್ರಾಂಶುಪಾಲ ರಾಧಾಕೃಷ್ಣ, ಪಿಯು ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್ , ತುಳು ಸಂಘದ ಕಾರ್ಯದರ್ಶಿ ದೇವಿ ಪ್ರಸಾದ್, ವಿದಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಿಶನ್, ವಿದ್ಯಾರ್ಥಿ ಸಂಯೋಜಕರಾದ ಗುರುಪ್ರಸಾದ್, ರಕ್ಷಿತ್, ಪ್ರಶಾಂತ್, ವಿಕಾಸ್ ಮತ್ತು ಮೇಘ ಉಪಸ್ಥಿತರಿದ್ದರು.
Kshetra Samachara
17/08/2022 02:01 pm