ಮೂಡುಬಿದಿರೆ: ಮಂಗಳೂರು ವಿವಿ ಮತ್ತು ಆಳ್ವಾಸ್ ಕಾಲೇಜು ಸಹಯೋಗದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ಕೌಟ್ ಗೈಡ್ಸ್ ಕನ್ನಡಭವನದಲ್ಲಿ ಎರಡು ದಿನಗಳು ನಡೆದ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ವಿಷಯಾಧಾರಿತ ರಾಜ್ಯಮಟ್ಟದ ಅಂತರ್ ವಿವಿ ಕಿರು ನಾಟಕ ಸ್ಪರ್ಧೆಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕಾಲೇಜಿನ "ಅಮರಕ್ರಾಂತಿ ಹೋರಾಟ 1837 ನಾಟಕ" ಪ್ರಥಮ ಹಾಗೂ ಮೈಸೂರು ವಿ.ವಿಯನ್ನು ಪ್ರತಿನಿಧಿಸಿದ್ದ ಗಂಗೂಬಾಯಿ ಹಾನಗಲ್ ಸಂಗೀತ ಕಾಲೇಜಿನ ಹಲಗಲಿ ಬೇಡರು ನಾಟಕ ದ್ವಿತೀಯ ಸ್ಥಾನವನ್ನು ಪಡೆದಿದೆ.
ಮಂಗಳೂರು ವಿ.ವಿಯ ಗೋವಿಂದದಾಸ್ ಕಾಲೇಜು ತೃತೀಯ, ಎನ್.ಎಂ.ಸಿ ಸುಳ್ಯ ಹಾಗೂ ಕೊಟ್ಟೂರ ಸ್ವಾಮಿ ಡಿ.ಎಡ್ ಕಾಲೇಜು ಬಳ್ಳಾರಿ ಸಮಾಧಾನಕರ ಬಹುಮಾನ ಪಡೆದಿವೆ.
Kshetra Samachara
09/08/2022 07:51 pm