ಮೂಡುಬಿದಿರೆ: ಪ್ರತಿಭೆ, ಛಲ ಹಾಗೂ ಗುರಿ ಇದ್ದರೆ ನಮ್ಮಲಿ ಆತ್ಮ ವಿಶ್ವಾಸ ಬೆಳೆಯುತ್ತದೆ ಎಂದು ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯ ಜ್ಯೋತಿ ಸಿಕ್ವೇರಾ ಹೇಳಿದರು.
ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ಕಲಾ ವಿಭಾಗ ಮತ್ತು ಮಾನವೀಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ಕಲಾಸಂಘದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಆತ್ಮವಿಶ್ವಾಸ ಇದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಛಲ ಹಾಗೂ ಗುರಿ ಗೆಲುವಿನ ಮೂಲ ಮಂತ್ರ. ಯಾವುದೇ ಕೆಲಸ ನಮ್ಮಿಂದ ಸಾಧ್ಯವಿಲ್ಲವೆಂದು ಕೈ ಚೆಲ್ಲಿ ಕುಳಿತುಕೊಳ್ಳಬಾರದು. ಅಸಾದ್ಯವನ್ನು ಸಾಧ್ಯವನ್ನಾಗಿಸಿ ಮಾಡಲು ಕಠಿಣ ಪರಿಶ್ರಮ ಮತ್ತು ಏಕಾಗ್ರತೆ ಅಗತ್ಯ ಎಂದರು.
ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಮಾತನಾಡಿ ಒಳ್ಳೆಯ ಕನಸು ಹಾಗೂ ಯೋಜನೆ ನಮ್ಮ ಗುರಿಯನ್ನು ಸಹಕಾರಗೊಳಿಸುತ್ತದೆ ಇದರಿಂದ ಇನ್ನಷ್ಟು ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ೨೦೨೧-೨೨ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ ಡಿ, ಕಲಾ ವಿಭಾಗದ ಸಂಯೋಜಕ ದಾಮೋದರ, ಮಾನವೀಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೇಣುಕಾ ಹಾಗೂ ಚಂದ್ರಕಾAತ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಬಸವರಾಜ್ ಸ್ವರೂಪ್ ಸ್ವಾಗತಿಸಿ, ಮೆಲಿಸ್ಸಾ ಡಿಸೋಜಾ ವಂದಿಸಿ, ಸೃಷ್ಟಿ ನಿರೂಪಿಸಿದರು.
Kshetra Samachara
04/08/2022 06:19 pm