ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳಾಯಿಬೆಟ್ಟು:ಶಾಲಾ ಮಕ್ಕಳಿಗಾಗಿ ಚೆಸ್ ಆಡೋಣ ಅಭಿಯಾನ ಕಾರ್ಯಕ್ರಮ

ಬಜಪೆ:ಸ್ಥಳೀಯ ಶಾಲಾ ಮಕ್ಕಳಿಗಾಗಿ ಸರಕಾರದ ಪ್ರಾಯೋಜಕತ್ವದಲ್ಲಿ 'ಗ್ರಾಮ ಚದುರಂಗ '(ಚೆಸ್)ಆಡೋಣ ಅಭಿಯಾನ ಕಾರ್ಯಕ್ರಮವು ಉಳಾಯಿಬೆಟ್ಟು ಗ್ರಾಮ ಪಂಚಾಯತ್ ನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ಅವರು ಉದ್ಘಾಟಿಸಿದರು.ಹರೇಕಳ ಪಂಚಾಯತ್ ಪಿಡಿಓ ಯಶವಂತ ಬೆಳ್ಚಡ ಅವರು ಆಟದ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.ಪಂದ್ಯಾಟದಲ್ಲಿ ಡಾ.ಬಿ.ಅರ್ ಅಂಬೇಡ್ಕರ್ ವಸತಿ ಶಾಲೆ ಗುರುಪುರ ,ಉಳಾಯಿಬೆಟ್ಟು ಹಾಗೂ ಸುತ್ತಮುತ್ತಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವೇದಿಕೆಯಲ್ಲಿ ಪಂಚಾಯತ್ ಪಿಡಿಓ ಅನಿತಾ ಕ್ಯಾಥರಿನ್,ಪಂಚಾಯತ್ ಸದಸ್ಯ ದಿನೇಶ್,ಕ್ರೀಡಾ ಶಿಕ್ಷಕಿ ಶಶಿಕಲಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸ್ಥಳೀಯ ಚೆಸ್ ಪಟುಗಳಾದ ನವಾಜ್,ಚೇತನ್ ,ರಶೀದ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದ್ದರು.

Edited By : PublicNext Desk
Kshetra Samachara

Kshetra Samachara

04/08/2022 12:38 pm

Cinque Terre

1.35 K

Cinque Terre

0

ಸಂಬಂಧಿತ ಸುದ್ದಿ