ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಮಾಯಕ ಕಾರ್ಯಕರ್ತರ ಮನೆಗೆ ನುಗ್ಗಿ ಬೆದರಿಸಿದರೆ, ಧರಣಿ ನಡೆಸುವೆ!

ಮಂಗಳೂರು: ಕೊಲೆ ಮಾಡಿದ ಆರೋಪಿಗಳು ಬಳಸಿದ ವಾಹನ , ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ನಿಮ್ಮ ಇಲಾಖೆಗೆ ಸಿಕ್ಕಿದ್ದರೂ, ನೈಜ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದನ್ನು ಬಿಟ್ಟು ,ಅಮಾಯಕ ಕಾರ್ಯಕರ್ತರನ್ನು ಎಳೆದುಕೊಂಡು ಹೋಗಿ ತನಿಖೆಯ ನೆಪದಲ್ಲಿ ಕಿರುಕುಳ ನೀಡಿದರೆ ಕಾರ್ಯಕರ್ತರ ಪರವಾಗಿ ನಿಮ್ಮ ಮುಖ್ಯ ಕಚೇರಿಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅವರು ಪೊಲೀಸ್ ಆಯುಕ್ತರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಸಾಕ್ಷ್ಯಾಧಾರ ನಿಮ್ಮ ಕೈಯ್ಯಲ್ಲಿದೆ.ಆರೋಪಿಗಳನ್ನು ಬಂಧಿಸಿ ,ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ. ಆದರೆ ಅಮಾಯಕ ಕಾರ್ಯಕರ್ತರ ಮನೆಗೆ ನುಗ್ಗಿ, ಅವರ ಕುಟುಂಬದಲ್ಲಿ ಭೀತಿ ಹುಟ್ಟಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬಾರದು.ಈ ಬಗ್ಗೆ ನನಗೆ ದೂರುಗಳು ಬರುತ್ತಿದ್ದು, ನಿಮ್ಮ ಅನುಚಿತ ವರ್ತನೆಯ ಬಗ್ಗೆ ಗೃಹ ಸಚಿವರಿಗೆ ದೂರು ನೀಡಲಿದ್ದೇನೆ.

ನಾನು ಪದವಿಗಿಂತ ಕಾರ್ಯಕರ್ತರ ಹಿತವೇ ಮುಖ್ಯ ಎಂದು ಪರಿಗಣಿಸಿದ್ದೇನೆ. ಕಾರ್ಯಕರ್ತರ ಕುಟುಂಬಕ್ಕೆ ನೋವುಂಟು ಮಾಡಿದರೆ ಸಹಿಸಲಾಗದು .ತಕ್ಷಣ ನೈಜ ಆರೋಪಿಗಳ ಪತ್ತೆಗೆ ಕ್ರಮ ಜರುಗಿಸಿ ಎಂದು ಒತ್ತಾಯಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

31/07/2022 10:25 am

Cinque Terre

3.47 K

Cinque Terre

2

ಸಂಬಂಧಿತ ಸುದ್ದಿ