ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಅಧಿಕಾರದ ದುರಾಸೆಗೆ ಯುವಜನತೆಯನ್ನು ದಾರಿತಪ್ಪಿಸುವ ಕೃತ್ಯ ಖಂಡನೀಯ; ಡಿ ಆರ್ ರಾಜು

ಕಾರ್ಕಳ: ಬಿಜೆಪಿಯ ಯುವ ಮುಖಂಡ ಬಿಲ್ಲವ ಜನಾಂಗದ ಯುವ ನಾಯಕ ನೆಟ್ಟಾರು ಪ್ರವೀಣ್ ಕೊಲೆ ಖಂಡನೀಯ. ಪ್ರವೀಣ್ ಪೂಜಾರಿ ಹಂತಕರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ ಆರ್ ರಾಜು ಆಗ್ರಹಿಸಿದ್ದಾರೆ.

ನೆಟ್ಟಾರು ಪ್ರವೀಣ್ ಪೂಜಾರಿ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗೆಜ್ಜೆಗಿರಿ ಕೋಟಿ ಚೆನ್ನಯ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದರು.

ಸಂಘಟನೆಯ ಹೆಸರಿನಲ್ಲಿ ಅಮಾಯಕ ಯುವಕರನ್ನು ಮನಸ್ಸಿನಲ್ಲಿ ಜಾತಿ ಧರ್ಮದ ದ್ವೇಷದ ಕಿಚ್ಚನ್ನು ಹೊತ್ತಿಸಿ ಅದರಲ್ಲಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಲು ಹೊರಟಿರುವ ನಾಯಕರಿಗೆ ಅವರ ಕುಟುಂಬದ ಕಣ್ಣೀರ ಶಾಪ ತಟ್ಟಲಿದೆ ಎಂದಿದ್ದಾರೆ.ಜಾತಿ ಧರ್ಮದ ಬಗ್ಗೆ ಕಂದಕ ತೋಡುವುದನ್ನು ಬಿಟ್ಟು ಸೌಹಾರ್ದ ಸಮಾಜವನ್ನು ನಿರ್ಮಾಣ ಮಾಡುವತ್ತ ಗಮನ ಹರಿಸಿ ಎಂದು ಅವರು ಕರೆ ನೀಡಿದರು.

ನಾಯಕರು ತಮ್ಮ ರಾಜಕೀಯದ ದುರಾಸೆಗೆ ಯುವ ಜನಾಂಗವನ್ನು ತಪ್ಪಿಸುವ ಕೆಲಸವನ್ನು ಬಿಟ್ಟು ಅವರ ಸುಂದರ, ಸುಮಧುರ, ಸಂತುಷ್ಟ ಜೀವನಕ್ಕೆ ದಾರಿಯಾಗುವ ಉನ್ನತ ಶಿಕ್ಷಣ ಉದ್ಯೋಗ ಕೊಡಿಸುವಲ್ಲಿ ಪ್ರಯತ್ನಿಸಲಿ ಎಂದು ಸಲಹೆ ನೀಡಿದರು.

Edited By : PublicNext Desk
Kshetra Samachara

Kshetra Samachara

29/07/2022 10:25 pm

Cinque Terre

4.17 K

Cinque Terre

1

ಸಂಬಂಧಿತ ಸುದ್ದಿ