ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪೆರಾರ:ಕೃಷಿ ಗದ್ದೆಯಲ್ಲಿ ವಿದ್ಯಾರ್ಥಿನಿಯರಿಂದ ನಾಟಿ ಕಾರ್ಯ

ಬಜಪೆ:ಪಡುಪೆರಾರದ ಕೊರಕಂಬ್ಳದಲ್ಲಿ ಕೃಷಿಕರಾದ ಕೃಷ್ಣ ಅವರ ಕೃಷಿ ಗದ್ದೆಯಲ್ಲಿ ಹೋಲಿ ಫ್ಯಾಮಿಲಿ ಫ್ರೌಢಶಾಲೆಯ ಸುರಕ್ಷಾ ಪರಿಸರ ಸಂಘದ ವಿದ್ಯಾರ್ಥಿಗಳು ಭತ್ತದ ನಾಟಿ ಕಾರ್ಯವನ್ನು ಮಾಡಿದರು.ನೇಜಿ ಹಾಕಲಾಗಿದ್ದ ಭತ್ತದ ಗಿಡಗಳನ್ನು ಕೀಳುವ ಜತೆಗೆ ವಿದ್ಯಾರ್ಥಿಗಳು ಭತ್ತದ ನಾಟಿಯನ್ನು ಮಾಡಿದರು.ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕಿ ಭ.ಅನ್ನಮರಿಯ ಅವರು ಚಾಲನೆ ನೀಡಿದರು.

ವಿದ್ಯಾರ್ಥಿಗಳು ಬೆಳಿಗ್ಗೆ ನೇಜಿ ತೆಗೆಯುವ ಜತೆ ಸುಮಾರು 50 ಸೆಂಟ್ಸ್ ಜಾಗದ ಭತ್ತದ ಗದ್ದೆಯಲ್ಲಿ ನಾಟಿ ಮಾಡಿದರು.ಇವರೊಂದಿಗೆ 15 ಮಂದಿ ಮಹಿಳೆಯರು ಭಾಗವಹಿಸಿದರು.ನಾಟಿ ಕಾರ್ಯದಲ್ಲಿ ಸುಮಾರು 40 ವಿದ್ಯಾರ್ಥಿನಿಯರು ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.

ನಾಟಿಯ ಸಂದರ್ಭ ನಾಟಿ ಪಾಡ್ದನ ಓ ಬೇಲೆ ಹಾಡಲಾಯಿತು.ಊಟಕ್ಕೆ ಆಟಿಯ ಖಾದ್ಯದ ತಯಾರಿಕೆ ಮಾಡಲಾಗಿದ್ದು,ವಿದ್ಯಾರ್ಥಿಗಳು ಸವಿದರು.ಬಳಿಕ ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಲಿಲ್ಲಿ ಮೇನೇಜಸ್,ಭ.ಸಿಂಥಿಯಾ,ಲಿಟ್ಲ ಫ್ಲವರ್ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಭ.ಪ್ರೆಪಿಲ್ಡಾ,ಸಂಘದ ಸಂಚಾಲಕ ವಾಸುದೇವ ರಾವ್ ಕುಡುಪು ಹಾಗೂ ಮತ್ತಿತರರು ಪಾಲ್ಗೊಂಡರು.

Edited By : PublicNext Desk
Kshetra Samachara

Kshetra Samachara

20/07/2022 11:13 am

Cinque Terre

4.02 K

Cinque Terre

0

ಸಂಬಂಧಿತ ಸುದ್ದಿ