ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದರೆ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ರಾಮಕೃಷ್ಣ ಶಿರೂರು

ಮೂಡುಬಿದಿರೆ:ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾಗಿ ಡಾ.ರಾಮಕೃಷ್ಣ ಶಿರೂರು ಆಯ್ಕೆಯಾಗಿರುತ್ತಾರೆ. ಮೂಡುಬಿದಿರೆ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾದ ಇವರು ಕಳೆದ 25 ವರ್ಷಗಳಿಂದ ಸಹ ಶಿಕ್ಷಕರ ಸಂಘಟನೆ ಮತ್ತು ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಕಾರ್ಯದರ್ಶಿಯಾಗಿ ಮೂಡುಬಿದಿರೆಯ ಜೈನ ಪ್ರೌಢಶಾಲೆಯ ಶ್ರೀ ನಿತೇಶ್ ಬಲ್ಲಾಳ್, ಕೋಶಾಧಿಕಾರಿಯಾಗಿ ಮೂಡುಬಿದಿರೆ ಪ್ರಾಂತ್ಯ ಸರಕಾರಿ ಪ್ರೌಢಶಾಲೆಯ ಶ್ರೀ ಬಾಲಕೃಷ್ಣ ರೇಖ್ಯ,ಸಂಘಟನಾ ಕಾರ್ಯದರ್ಶಿಯಾಗಿ ಬೆಳವಾಯಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀಮತಿ ಸೀಮಾ ನಾಯಕ್ ಮತ್ತು ರಾಜ್ಯ ಪರಿಷತ್ ಸದಸ್ಯರಾಗಿ ಪಡುಕೊಣಾಜೆ ಸರಕಾರಿ ಪ್ರೌಢಶಾಲೆಯ ಶ್ರೀ ಗಂಗಾಧರ ಪಾಟೀಲ್ ಅವರು ಆಯ್ಕೆಯಾಗಿರುತ್ತಾರೆ.

Edited By : PublicNext Desk
Kshetra Samachara

Kshetra Samachara

19/07/2022 10:20 pm

Cinque Terre

2.82 K

Cinque Terre

0

ಸಂಬಂಧಿತ ಸುದ್ದಿ