ಕಾರ್ಕಳ: ಆಕಸ್ಮಿಕವಾಗಿ ಬಿದ್ದು ಕೈ ಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪೆರ್ವಾಜೆಯ ರತಿ ಎಂಬವರಿಗೆ ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಮತ್ತು ಮಹಾಲಿಂಗೇಶ್ವರ ಮಹಿಳಾ ಮಂಡಲ ಪತ್ತೊಂಜಿಕಟ್ಟೆ, ಪೆರ್ವಾಜೆ ಇವರ ವತಿಯಿಂದ 50,000 ರೂ. ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ದೇವಾಡಿಗ, ಕಾರ್ಯದರ್ಶಿ ದಿನೇಶ್ ಕೊರಳಕೋಡಿ, ಕೋಶಾಧಿಕಾರಿ ಪ್ರಸನ್ನ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಂದ್ರ, ಗೌರವ ಸಲಹೆಗಾರ ಹೆನ್ರಿ ಸಾಂತ್ ಮಯೋರ್, ನಿಕಟಪೂರ್ವ ಅಧ್ಯಕ್ಷ ಸುರೇಶ್ ಸುವರ್ಣ, ಮಹಿಳಾ ಮಂಡಲದ ಉಪಾಧ್ಯಕ್ಷೆ ಜ್ಯೋತಿ ಆಚಾರ್ಯ, ಕಾರ್ಯದರ್ಶಿ ವೀಣಾ ರಾಜೇಶ್, ಜೊತೆ ಕಾರ್ಯದರ್ಶಿ ಶುಭಲಕ್ಷ್ಮೀ ಆರ್.ಬಂಗೇರ, ಸಾಂಸ್ಕೃತಿಕ ಕಾರ್ಯದರ್ಶಿ ಸುಜಯಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/07/2022 12:39 pm