ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಮುಂದಾಳು ಶೇಖ್ ಶರ್ಫುದ್ದೀನ್ ದಾವೂದ್ ನಿಧನ

ಉಡುಪಿ: ಉಡುಪಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಶೇಖ್ ಶರ್ಫುದ್ದೀನ್ ದಾವೂದ್ ಅವರು ಇಂದು ಬೆಳಿಗ್ಗೆ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.

ತನ್ನ ಜೀವನದುದ್ದಕ್ಕೂ ಉಡುಪಿಯ ವಿವಿಧ ಸಾಮಾಜಿಕ, ಸಾಮುದಾಯಿಕ ಸಂಘ ಸಂಸ್ಥೆಗಳ ಜೊತೆಗೂಡಿ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಎಂಬತ್ತರ ದಶಕದ ಆರಂಭದಲ್ಲಿ ಉಡುಪಿಯಲ್ಲಿ ಅಸ್ಥಿತ್ವಕ್ಕೆ ಬಂದ ಬಡ್ಡಿ ರಹಿತ ಹಣಕಾಸು ವ್ಯವಹಾರ ಸಂಸ್ಥೆ ಇಸ್ಲಾಮಿಕ್‌ ವೆಲ್ಫೇರ್ ಸೊಸೈಟಿಯನ್ನು ಕಟ್ಟಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದರು.

ಸುಮಾರು 25 ವರ್ಷಗಳ ಕಾಲ ಈ ಸಂಸ್ಥೆಯ ಕೋಶಾಧಿಕಾರಿಯಾಗಿದ್ದ ಅವರು ಯಾವುದೇ ಸಂಬಳ ಪಡೆಯದೆ ಪೂರ್ಣಾವಧಿ ಕಾರ್ಯಕರ್ತರಾಗಿ ಸಂಸ್ಥೆಗೆ ತನ್ನ ಸೇವೆ ನೀಡಿದರು. ಆ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಮೇತರರು ಕೂಡಾ ಸಂಸ್ಥೆಯಿಂದ ಲಾಭಾನ್ವಿತರಾಗುವಂತೆ ನೋಡಿಕೊಂಡರು. ಮುಂದೆ ಈ ಸಂಸ್ಥೆ ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೊಪರೇಟಿವ್ ಸೊಸೈಟಿ(ರಿ) ಎಂದು ಪರಿವರ್ತನೆಗೊಂಡಾಗಲೂ ಅದರೊಂದಿಗೆ ಅವರು ತನ್ನ ಕೊನೆಯ ದಿನಗಳ ತನಕ‌ ಸೇವೆ ನೀಡಿದರು.

ಎಪ್ಪತ್ತರ ದಶಕದಲ್ಲಿ ಉಡುಪಿ ಜಾಮಿಯ ಮಸೀದಿಯ ಆಡಳಿತವನ್ನು ಪಾರದರ್ಶಕ ಹಾಗೂ ಜವಾಬ್ದಾರಿ ಪ್ರಜ್ಞೆಯಿಂದ ಮುನ್ನಡೆಸಲು ಪ್ರಯತ್ನಿಸಿದ ಸಮೂಹದ‌ ಪ್ರಮುಖ ಭಾಗವಾಗಿದ್ದು ಮಸೀದಿಯ ಬೆಳವಣಿಗೆಯಲ್ಲಿ ತನ್ನ ಸೇವೆ ಸಲ್ಲಿಸಿದರು. ಮಸೀದಿಯ ಕೋಶಾಧಿಕಾರಿಯಾಗಿ ಆಡಳಿತ ಮಂಡಳಿಯ ಸದಸ್ಯರಾಗಿ ಸುಮಾರು ನಲವತ್ತು ವರ್ಷಗಳ ಕಾಲ ತನ್ನ ಸೇವೆ ನೀಡಿದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Edited By : PublicNext Desk
Kshetra Samachara

Kshetra Samachara

23/03/2022 02:28 pm

Cinque Terre

5.5 K

Cinque Terre

0

ಸಂಬಂಧಿತ ಸುದ್ದಿ