ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯ ಯುವ ಸಂಗಮ ಹಾಗೂ ಸರ್ಕಸ್ ತುಳು ಸಿನಿಮಾ ಸಹಯೋಗದಲ್ಲಿ ಕಂಡೊಡೊಂಜಿ ದಿನ

ಬಜಪೆ:ರಜತ ಸಂಭ್ರಮದಲ್ಲಿರುವ ಎಕ್ಕಾರು ವಿಜಯ ಯುವ ಸಂಗಮ ಹಾಗೂ ಸರ್ಕಸ್ ತುಳು ಸಿನಿಮಾ ಇವರ ಜಂಟಿ ಸಹಯೋಗದಲ್ಲಿ ಡಿ.5 ವಿಶ್ವ ಮಣ್ಣೆನ ದಿನಾಚರಣೆಯ ಪ್ರಯುಕ್ತ 'ಕಂಡೊಡೊಂಜಿ ದಿನ ' ಬಲೆ ಕೆಸರ್ಡ್ ಗೊಬ್ಬುಗ ಕ್ರೀಡಾ ಕೂಟವು ಎಕ್ಕಾರು ಬಡಕರೆ ಜಾರಂದಾಯ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.

ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ವೃಕ್ಷ ಮಾತೆ ತುಳಸಿಗೌಡ ಹಾಗೂ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ವಯೋಮಿತಿಗಳಲ್ಲಿ ಓಟ,ಮೂರು ಕಾಲಿನ ಓಟ,ಹಾಳೆಬಂಡಿ ಓಟ,ನಿಧಿ ಶೋದ ಕಬ್ಬಡ್ಡಿ,ವಾಲಿಬಾಲ್ ,ಪಿರಮಿಡ್ ,ತ್ರೋಬಾಲ್ ,ಸಂಗೀತ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು,ರೈನ್ ಡ್ಯಾನ್ಸ್,ವಿವಿಧ ಕೃಷಿ ಚಟುವಟಿಕೆಗಳ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ,ವಸ್ತು ಪ್ರದರ್ಶನ ಮತ್ತು ಮಾರಾಟ,ಮಣ್ಣೆನ ಮಡಿಕೆಗಳ ತಯಾರಿ ಹಾಗೂ ಮಾರಾಟ,ಕೆಸರಿನ ಗದ್ದೆಯಲ್ಲಿ ನೃತ್ಯ ತಂಡಗಳ ಸಾಂಸ್ಕೃತಿಕ ವೈಭವ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮಗಳು,ಪ್ರಶಂಸ ಕಾಪು,ಮೈಮ್ ರಾಮ್ ದಾಸ್ ಅರ್ಯನ್ ಡ್ಯಾನ್ಸ್ ಸ್ಟುಡಿಯೋ,ವಿಸ್ಮಯ ವಿನಾಯಕ್ ತಂಡದಿಂದಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.ಕನ್ನಡ - ತುಳು ಚಿತ್ರರಂಗದ ತಾರೆಯರಾದ ನವೀನ್ ಡಿ ಪಡೀಲ್,ಬೋಜರಾಜ್ ವಾಮಂಜೂರು,ಆರವಿಂದ್ ಬೋಳಾರ್,ರೂಪೇಶ್ ಶೆಟ್ಟಿ,ನಿರೀಕ್ಷ ಶೆಟ್ಟಿ,ಚಿರಶ್ರೀ ಅಂಚನ್,ನವ್ಯ ಪೂಜಾರಿ ಹಾಗೂ ಧನ್ವಿತ್ ಕಟೀಲ್ ಅವರುಗಳು ಕ್ರೀಡಾ ಕೂಟಕ್ಕೆ ಮೆರುಗು ನೀಡಲಿದ್ದಾರೆ.

Edited By : PublicNext Desk
Kshetra Samachara

Kshetra Samachara

21/11/2021 11:14 am

Cinque Terre

1.29 K

Cinque Terre

0

ಸಂಬಂಧಿತ ಸುದ್ದಿ