ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುದ್ರಾಡಿ ಗ್ರಾಮ ಪಂಚಾಯತ್: ವಿವಿಧ ಸವಲತ್ತು ವಿತರಣೆ

ಹೆಬ್ರಿ:ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತೀಯ ಪ.ಜಾತಿ ಮತ್ತು ಪ.ಪಂಗಡ ಸಮುದಾಯದ ವಿಧ್ಯಾರ್ಥಿಗಳಿಗೆ 2021-22 ನೇ ಸಾಲಿನ ಶೇ 25ರ ನಿಧಿಯಡಿ ಸಹಾಯಧನವನ್ನು ಮತ್ತು ಉಜ್ವಲ ಯೋಜನೆಯಡಿ ಗ್ಯಾಸ್ ಮತ್ತು ಕಿಟ್‍ಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಶ್ರೀ ಮಂಜುನಾಥ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಪಂಚಾಯತಿನ ಉಪಾಧ್ಯಕ್ಷರಾದ ವಸಂತಿ ಪೂಜಾರಿ, ಗ್ರಾಮ ಪಂಚಾಯತಿನ ಸದಸ್ಯರುಗಳಾದ ಸಂತೋಷಕುಮಾರ್ ಶೆಟ್ಟಿ, ಶುಭದರ ಶೆಟ್ಟಿ, ಜಗದೀಶ್ ಪೂಜಾರಿ,ಸನತ್ ಕುಮಾರ್, ಶಾಂತ ದಿನೇಶ ಪೂಜಾರಿ, ಪಂಚಾಯತ್ ಅಭಿವೃಧ್ಧಿ ಅಧಿಕಾರಿಯವರಾದ ಸದಾಶಿವ ಸೇರ್ವೇಗಾರ್, ಕಾರ್ಯದರ್ಶಿ ಶೋಭಾವತಿ, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಫಲಾನುಭವಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚಾಯತ್ ಗುಮಾಸ್ತರಾದ ಪದ್ಮನಾಭ ಆರ್ ಕುಲಾಲ್ ನಿರೂಪಿಸಿ, ಪಂಚಾಯತ್ ಸದಸ್ಯರಾದ ಶಾಂತ ದಿನೇಶ್ ಪೂಜಾರಿ ದನ್ಯವಾದ ಸಮರ್ಪಿಸಿದರು.

Edited By : PublicNext Desk
Kshetra Samachara

Kshetra Samachara

04/11/2021 12:52 pm

Cinque Terre

1.45 K

Cinque Terre

0

ಸಂಬಂಧಿತ ಸುದ್ದಿ