ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ತಳಿಯ ಹಣ್ಣುಗಳ ಸಸಿನೆಡುವ ಸ್ವರ್ಧೆ

ಬಜಪೆ : ದ.ಕ ಜಿಲ್ಲಾ ಬಡಜನರ ಹಾಗೂ ನದಿಕೊರೆತ ಎದುರಿಸುವವರ ಸಂಘ ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ “ವಿವಿಧ ತಳಿಯ ಹಣ್ಣುಗಳ ಸಸಿನೆಡುವ ಸ್ವರ್ಧೆ”ಯಲ್ಲಿ ಪ್ರಥಮ ಬಹುಮಾನ ಅತೀ ಹೆಚ್ಚು ಹಣ್ಣಿನ ಸಸಿಗಳನ್ನು ಪೋಷಿಸುತ್ತಿರುವ ನರೇಶ್ ಎಸ್ ಶೆಟ್ಟಿ, ಶ್ರೀ ದುರ್ಗಾಪರಮೇಶ್ವರಿ ಪಿಯು ಕಾಲೇಜು ಕಟೀಲು, ದ್ವೀತಿಯ ಬಹುಮಾನ ಅಬ್ದುಲ್ ಗಫೂರ್ ಸುಳ್ಯ, ತೃತೀಯ ಬಹುಮಾನ ನೆಲ್ಸನ್ ಡಿಸೋಜಾ ಪುತ್ತೂರು ಬಹುಮಾನಗಳನ್ನು ಪಡೆದಿರುತ್ತಾರೆ.

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕೃಷಿಕರಾದ ಕೆಮ್ರಾಲ್ ಸುಂದರ ಕೋಟ್ಯಾನ್, ಡೇನಿಯಲ್ ದೇವರಾಜ್, ಸುಪ್ರೀಂ ಕೋರ್ಟ್ನ ವಕೀಲರಾದ ಸುಭಾಸ್ ಚಂದ್ರ ಸಾಗರ, ಅಕ್ಬರ್ , ಸಮಾಜ ಸೇವಕ ಚಂದ್ರಹಾಸ್, ಶ್ರೀಮತಿ ಲೀಲಾವತಿ, ಮಹಮ್ಮದ್ ಹಫೀಲ್ ಪಿ.ಟಿ ನೆಕ್ಕಿಲಾಡಿ ಮಹಮ್ಮದ್ ಸುಹೈಲ್ ಬಿ. ಕೇಶವ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

01/09/2021 05:39 pm

Cinque Terre

3.84 K

Cinque Terre

0

ಸಂಬಂಧಿತ ಸುದ್ದಿ