ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿರತೆ ದಾಳಿ - ಬೋನುಇಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು

ಬಜಪೆ: ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಸುಲ ಪದವು,ಮುಗೇರಬೆಟ್ಟುವಿನ ಬೇಡೆ ಹಾಗೂ ಇನ್ನಿತರ ಪ್ರದೇಶಗಳ ಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯ ಕಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದರು.ಕಳೆದ ಎರಡು ವಾರಗಳ ಹಿಂದಷ್ಟೆ ಎಕ್ಕಾರು ಅರಸುಲ ಪದವು ಸಮೀಪದ ಮನೆಯೊಂದರ ಮೇಯಲು ಬಿಟ್ಟ ದನವೊಂದು ಅರ್ಧಂಬರ್ಧ ತಿಂದು ಹಾಕಿದ ಸ್ಥಿತಿಯಲ್ಲಿ ಅರಸುಲ ಪದವು ಸಮೀಪದ ಮುಂಡೆವುದ ಬಲ್ಲೆ ಸಮೀಪದ ಶವ ಪತ್ತೆಯಾಗಿತ್ತು.ನಂತರ ಕೆಳದಿನಗಳ ಬಳಿಕ ಎಕ್ಕಾರು ಮುಗೇರಬೆಟ್ಟು ಬೇಡೆ ಸಮೀಪದ ಮನೆಯೊಂದರ ಸಾಕು ನಾಯಿಯೊಂದರ ಮೇಲೆ ಚಿರತೆ ದಾಳಿ ಮಾಡಿದ್ದು,ಗಾಯಗೊಂಡ ನಾಯಿಯು ಅದೃಷ್ಟವಶಾತ್ ಪಾರಾಗಿದೆ.

ಚಿರತೆ ನಾಯಿಯನ್ನು ಹೊತ್ತುಕೊಂಡು ಹೋಗುವ ಭಯಾನಕ ದೃಶ್ಯವು ಸಮೀಪದಲ್ಲೇ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿತ್ತು.ಅಲ್ಲದೆ ನಾಗರೀಕರು ರಾತ್ರಿ ಹೊತ್ತಲ್ಲಿ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದರು.ಸಂಜೆ ವೇಳೆಗೆ ಕೆಲಸ ಬಿಟ್ಟು ಮನೆ ಕಡೆಗೆ ಹೋಗುವ ಕಾರ್ಮಿಕರಿಗೆ ಚಿರತೆ ಕಾಣ ಸಿಕ್ಕಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.ಪದೇ ಪದೇ ಮನೆಗಳಲ್ಲಿ ಸಾಕು ವಂತಹ ಪ್ರಾಣೆಗಳ ಮೇಲೆ ಚಿರತೆ ದಾಳಿ ಮಾಡುದರಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಲಾಗಿದೆ. ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಎಕ್ಕಾರು ಅರಸುಲಪದವು ಹಾಗೂ ಮುಗೇರಬೆಟ್ಟು ಬೇಡೆ ಸಮೀಪ ಬೋನುಗಳನ್ನು ಇಟ್ಟಿದ್ದಾರೆ.

Edited By : PublicNext Desk
Kshetra Samachara

Kshetra Samachara

24/08/2021 04:06 pm

Cinque Terre

7 K

Cinque Terre

0

ಸಂಬಂಧಿತ ಸುದ್ದಿ