ಉಡುಪಿ: ಉಡುಪಿಯ ಮಿತ್ರ ಆಸ್ಪತ್ರೆಯ ಪರಿಸರದಲ್ಲಿ ಕಾಲು ಕೊಳೆತು ಅಸಹಾಯಕ ಸ್ಥಿತಿಯಲ್ಲಿದ್ದ ಬೀದಿನಾಯಿಗೆ ಪ್ರಾಣಿಪ್ರಿಯರಿಂದಾಗಿ ಪುನರ್ಜನ್ಮ ಸಿಕ್ಕಿದೆ. ಕೆಲವು ವರ್ಷಗಳಿಂದ ದಿನ ಕಳೆಯುತ್ತಿದ್ದ ಬೀದಿ ನಾಯಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಅದೇ ಪರಿಸರದಲ್ಲಿ ನೆಲೆ ಕಲ್ಪಿಸಲಾಗಿದೆ.
ನಾಯಿಗೆ ಖಾಸಗಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ನಾಯಿಯ ಕಾಲು ಕತ್ತರಿಸಲು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಒಂದು ತಿಂಗಳ ಹಿಂದೆ ನಾಯಿಯ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಲಾಯಿತು. ಆ ಬಳಿಕ ವಿಶ್ರಾಂತಿಗಾಗಿ ನಾಯಿಯನ್ನು ಶ್ವಾನ ಆಶ್ರಮದಲ್ಲಿ ಆಶ್ರಯ ಒದಗಿಸಲಾಗಿತ್ತು. ನಾಯಿ ಸಂಪೂರ್ಣ ಚೇತರಿಕೆ ಕಂಡ ಬಳಿಕ ನಿನ್ನೆಯ ದಿನ ಮೊದಲಿದ್ದ ಪರಿಸರದಲ್ಲಿ ಬಿಡಲಾಯಿತು. ಈ ಮೊದಲು ಸ್ಥಳಿಯರು ಈ ನಾಯಿಗೆ ಆಹಾರ ಒದಗಿಸುತ್ತಿದ್ದರು. ಈಗ ಎಲ್ಲರಿಂದಲೂ ಹರ್ಷ ವ್ಯಕ್ತವಾಗಿದೆ. ಚಿಕಿತ್ಸೆಗೆ ಸುಮಾರು 25 ಸಾವಿರ ಖರ್ಚು ತಗುಲಿದ್ದು, ವೆಚ್ಚವನ್ನು ಬಬಿತಾ ಮಧ್ವರಾಜ್ ಮಲ್ಪೆ, ಸುಮನಾ ಭರಿಸಿದರು.
ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಹಾಗೂ ಪ್ರಾಣಿಪ್ರಿಯರಾದ ಮಂಜುಳ ಕರ್ಕೆರಾ, ಅನೀಶ್, ನವೀನ್ ಅವರ ಪ್ರಾಣೆದಯೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
07/08/2021 11:11 am