ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವಕರ್ಮ ಸಮಾಜವು ಕೇವಲ ಒಂದು ಜಾತಿಯಲ್ಲ, ಅದೊಂದು ಸಂಸ್ಕೃತಿ : ಉಪತಹಶೀಲ್ದಾರ್ ಭೀಮಪ್ಪ

ಬೈಂದೂರು : ವಿಶ್ವಕರ್ಮ ಸಮಾಜ ಎನ್ನುವುದೇ ಒಂದು ಸಂಸ್ಕೃತಿ. ಶಿಲ್ಪಕಲೆಗಳ ಪಿತಾಮಹ ವಿಶ್ವಕರ್ಮ ಸಮಾಜವು ಪಂಚ ಕಸುಬುಗಳ ಮೂಲಕ ದೇಶದ ಸಂಸ್ಕೃತಿ ಬಿಂಬಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾ, ಶಿಲ್ಪಕಲೆಗಳ ಮೂಲಕ ಐತಿಹಾಸಿಕ ಸ್ಮಾರಕ, ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮದ ಶಿಲ್ಪಿಗಳಿಗೆ ಸಲ್ಲುತ್ತದೆ ಎಂದು ಬೈಂದೂರು ಉಪ ತಹಶೀಲ್ದಾರ್ ಭೀಮಪ್ಪ ಹೇಳಿದರು.

ಅವರು ಶನಿವಾರ ತಹಶೀಲ್ದಾರ್ ಕಚೇರಿ ವತಿಯಿಂದ ಹಾಗೂ ವಿಶ್ವಕರ್ಮ ಯುವಕ ಸಂಘ ರಿ ಬೈಂದೂರು ಇವರ ಸಹಯೋಗದೊಂದಿಗೆ ಕಚೇರಿಯ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ನಿಟ್ಟಿನಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಜನರಿಗೆ ಹಲವು ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೆ ತಂದಿದೆ. ವಿಶ್ವಕರ್ಮ ಸಮಾಜ ಭಾರತ ದೇಶದಲ್ಲಿ ವಿಗ್ರಹ ಮತ್ತು ಶಿಲ್ಪಕಲೆಯಿಂದ ಗುರುತಿಸಿಕೊಂಡಿದೆ ಎಂದರು.

ಉಪತಹಶೀಲ್ದಾರ್ ಲತಾ ಎಸ್ ಶೆಟ್ಟಿ, ಗಿರಿಜಾ ಮೊಗೇರ, ಬೈಂದೂರು ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಪಾಟೀಲ್, ಬೈಂದೂರು ವಿಶ್ವಕರ್ಮ ಯುವಕ ಸಂಘದ ಗೌರವಾಧ್ಯಕ್ಷ ನಾಗೇಂದ್ರ ಆಚಾರ್, ಸಂಘದ ಅಧ್ಯಕ್ಷ ನಾಗರಾಜ್ ಆಚಾರ್ ಬಂಕೇಶ್ವರ, ಕಾರ್ಯದರ್ಶಿ ಹರೆಗೋಡು ಸುಶಾಂತ್ ಆಚಾರ್, ಸಂಘದ ಸಂಘಟನಾ ಕಾರ್ಯದರ್ಶಿ ನಾಗರಾಜ ಆಚಾರ್ ಯೋಜನಾನಗರ, ಹರೆಗೋಡು ಸುಮಂತ್ ಆಚಾರ್, ವಿಘ್ನೇಶ್ ಆಚಾರ್ ಯೋಜನಾನಗರ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

Edited By : PublicNext Desk
Kshetra Samachara

Kshetra Samachara

18/09/2022 11:14 am

Cinque Terre

2.74 K

Cinque Terre

0

ಸಂಬಂಧಿತ ಸುದ್ದಿ