ಬೇಸಾಯ ಕೆಲಸ ಮಾಡಲು ಜನ ಸಿಗುವುದಿಲ್ಲ ಎಂದು ಹೇಳುತ್ತಾರೆ. ನೇಜಿ ತೆಗೆಯಲು, ನೆಡಲು ಜನ ಸಿಗುವುದಿಲ್ಲ ಎನ್ನುವ ಈ ಕಾಲದಲ್ಲಿ ಒಂದೇ ಗದ್ದೆಯಲ್ಲಿ ಎಷ್ಟು ಜನ ನಾಟಿ ಕೆಲಸ ಮಾಡುತ್ತಿದ್ದಾರೆ ನೋಡಿ....
ಇದು ಕಾಣ ಸಿಕ್ಕಿರುವುದು ಕಾಪು ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಂಜ ಶ್ರೀಧರ ತಂತ್ರಿಗಳ ಮನೆಯಲ್ಲಿ. ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳ ತಂತ್ರಿ ನಿವಾಸದ 7 ಎಕರೆ ಕೃಷಿ ಗದ್ದೆಯಲ್ಲಿ ಭತ್ತದ ಕೃಷಿ ಕೆಲಸವನ್ನು ಪ್ರಾರಂಭಿಸಿದ್ದು 40ಕ್ಕೂ ಅಧಿಕ ಮಂದಿ ಸ್ಥಳೀಯ ಕೃಷಿ ಕೂಲಿ ಕಾರ್ಮಿಕರನ್ನೊಳಗೊಂಡ ತಂಡವು ನೇಜಿ ಕೀಳುವುದು ಮತ್ತು ನೇಜಿ ನಾಟಿ ಕೆಲಸದಲ್ಲಿ ನಿರತವಾಗಿದೆ.
ಕರಾವಳಿಯಲ್ಲಿ ನಡೆಸಲಾಗುತ್ತಿರುವ ಸಾಂಪ್ರದಾಯಿಕ ಭತ್ತದ ನಾಟಿ ಕೆಲಸವನ್ನು ಮುಂದಿನ ಪೀಳಿಗೆಗೂ ಪರಿಚಯಿಸಿ ಕೊಡುವ ಮತ್ತು ಉಳಿಸಿಕೊಡಬೇಕೆಂಬ ಇರಾದೆಯೊಂದಿಗೆ ತಮ್ಮ ಮನೆಯಲ್ಲಿ ಪ್ರತಿ ವರ್ಷ ಸಾಂಪ್ರದಾಯಿಕ ಭತ್ತದ ನಾಟಿ ಕೆಲಸ ನಡೆಸಲಾಗುತ್ತಿದೆ. ಈ ಬಾರಿ ಮಳೆ ಕಾರಣದಿಂದ ವಿಳಂಭವಾಗಿ ನಡೆಯುವಂತಾಗಿದೆ.
ಒಟ್ಟಿನಲ್ಲಿ ಯಾಂತ್ರಿಕೃತ ಕೃಷಿ ಕಾರ್ಯದ ನಡುವೆಯೂ ಸಾಂಪ್ರದಾಯಿಕ ಕೃಷಿಯನ್ನು ಉಳಿಸಿ-ಬೆಳೆಸುವ ಇವರ ಪ್ರಯತ್ನವನ್ನು ಶ್ಲಾಘಿಸಲೇಬೇಕಾದೆ.
PublicNext
25/07/2022 07:56 pm