ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ತೀರ್ಥಹಳ್ಳಿ- ಉಡುಪಿ- ಮಂಗಳೂರು ರಸ್ತೆಯ ಆಗುಂಬೆ ಘಾಟ್ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಈ ಮಾರ್ಗದಲ್ಲಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿದ ಭಾರಿ ಹಾಗೂ ಸತತ ಮಳೆಯಾಗುವ ದಿನಗಳಂದು 12 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಇದಕ್ಕೆ ಪರ್ಯಾಯ ಮಾರ್ಗವಾಗಿ ಭಾರಿ ವಾಹನಗಳು ಉಡುಪಿ- ಬ್ರಹ್ಮಾವರ- ಬಾರ್ಕೂರು- ಶಂಕರನಾರಾಯಣ- ಸಿದ್ಧಾಪುರ- ಹೊಸಗಂಡಿ- ಹುಲಿಕಲ್ ಘಾಟಿ- ಹೊಸನಗರ-ತೀರ್ಥಹಳ್ಳಿ ಮಾರ್ಗದಲ್ಲಿ ಹಾಗೂ ಉಡುಪಿ- ಕಾರ್ಕಳ- ಬಜಗೋಳಿ-ಎಸ್.ಕೆ.ಬಾರ್ಡರ್-ಕೆರೆಕಟ್ಟೆ-ಶೃಂಗೇರಿ-ಶಿವಮೊಗ್ಗ ಮೂಲಕ ಸಂಚರಿಸಬೇಕೆಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
Kshetra Samachara
13/11/2020 09:04 pm