ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಎಫ್‌ಸಿ ಮಾತುಕತೆ-2020 ಬಿಡುಗಡೆ,ಈಗಿನ ಕಾಲಕ್ಕೆ ಅನಿವಾರ್ಯ:ಗಿರೀಶ್ ಕುಮಾರ್

ಉದ್ಯಾವರ : ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲಿನ 2019-20ನೇ ಸಾಲಿನ ವರದಿ ‘ಯು.ಎಫ್.ಸಿ. ಮಾತುಕತೆ -2020’ಯನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯ ಗಿರೀಶ್ ಕುಮಾರ್ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು,ಸಂಸ್ಥೆಯ ಕೆಲಸ ಕಾರ್ಯಗಳ ಕುರಿತು ದಾಖಲಾದರೆ ಮಾತ್ರ ದೀರ್ಘ ಕಾಲ ಉಳಿಯುತ್ತದೆ.ಅದು ಈಗಿನ ಕಾಲಕ್ಕೆ ಅನಿವಾರ್ಯವು ಹೌದು ಎಂದು ಅಭಿಪ್ರಾಯ ಪಟ್ಟರು.

ಸಂಸ್ಥೆಯ ಅಧ್ಯಕ್ಷ ಶೇಖರ್ ಕೆ. ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಚಂದ್ರಾವತಿ ಎಸ್. ಭಂಡಾರಿ,ನಿರ್ದೇಶಕರಾದ ನಾಗೇಶ್ ಕುಮಾರ್, ಶರತ್ ಕುಮಾರ್,ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ, ಕಾರ್ಯದರ್ಶಿ ಅನೂಪ್ ಕುಮಾರ್, ರವಿಕಿರಣ್ ಪಿ.ಎಸ್., ಉಪಾಧ್ಯಕ್ಷ ಪುಂಡರೀಶ್ ಕುಂದರ್, ಮಾಜಿ ಅಧ್ಯಕ್ಷ ತಿಲಕ್‌ರಾಜ್ ಸಾಲ್ಯಾನ್, ಮಾಜಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ಮುಂತಾದವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

03/11/2020 11:18 pm

Cinque Terre

8.71 K

Cinque Terre

0

ಸಂಬಂಧಿತ ಸುದ್ದಿ