ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಧಿಕೃತ ಮಾಂಸ ವ್ಯಾಪಾರಿಗಳಿಗೆ ಮೇಯರ್ ವಾರ್ನಿಂಗ್

ಮಂಗಳೂರು-ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ನಗರಕ್ಕೆ ಮಾಂಸ ತಂದು ಮಾರಾಟ ಮಾಡುವ ಮಾರಾಟಗಾರರ ವಿರುದ್ಧ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ ಕ್ರಮಕ್ಕೆ ಮುಂದಾಗಿದ್ದಾರೆ‌. ಈ ರೀತಿ ಅನಧಿಕೃತವಾಗಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಪರವಾನಗಿ ರದ್ದು ಮಾಡುವ ಸೂಚನೆಯನ್ನೂ ಅವರು ನೀಡಿದ್ದಾರೆ.

ಈ ಬಗ್ಗೆ ಈಗಾಗಲೇ ನಿಗಮಕ್ಕೆ ಹಲವು ದೂರುಗಳು ಬಂದಿವೆ. ಸುಮಾರು 20 ಜನ ವ್ಯಾಪಾರಸ್ಥರು ಅನಧಿಕೃತವಾಗಿ ಮಾಂಸ ಮಾರಾಟದಲ್ಲಿ ತೊಡಗಿದ್ದಾರೆಂಬ ಮಾಹಿತಿ ದೊರೆತಿದೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು‌ ಎಂದು ದಿವಾಕರ್ ಪಾಂಡೇಶ್ವರ್ ಹೇಳಿದ್ದಾರೆ.

ಎಲ್ಲ ಮಾಂಸ ವ್ಯಾಪಾರಸ್ಥರು ನಿಗಮದಿಂದ ಮಾನ್ಯತೆ ಪಡೆದ ಕಸಾಯಿ ಖಾನೆಗಳಿಂದಲೇ ಮಾಂಸ ಖರೀದಿಸಿ ಮಾರಾಟ ಮಾಡಬೇಕು‌. ಮತ್ತು ಅದಕ್ಕೆ ಕಸಾಯಿ ಖಾನೆಯಿಂದ ರಸೀದಿ ಪಡೆಯಬೇಕು ಜೊತೆಗೆ ಕಸಾಯಿ ಖಾನೆಗೆ ಪ್ರಾಣಿಗಳನ್ನು ಸಾಗಿಸುವಾಗ ಕಡ್ಡಾಯವಾಗಿ ಸಾರಿಗೆ ಇಲಾಖೆಯಲ್ಲಿ ನೋಂದಾಯಿತ ವಾಹನಗಳಲ್ಲಿ ಸಾಗಿಸಬೇಕೆಂದು ಸೂಚನೆ ನೀಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

24/10/2020 03:59 pm

Cinque Terre

8.44 K

Cinque Terre

1

ಸಂಬಂಧಿತ ಸುದ್ದಿ