ಮುಲ್ಕಿ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ಕೆ ಜಿ ಬೆಟ್ಟು ಮತ್ತು ಭಂಡಾರ ಮನೆ ಬಳಿ ಸ್ಥಳೀಯರಿಗೆ ಅಪಾಯಕಾರಿಯಾಗಿ ಕಾಡುತ್ತಿದ್ದ ಹೆಜ್ಜೇನು ಗೂಡನ್ನು ಸ್ಥಳೀಯ ಸಂಘ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಕರ್ತರಿಂದ ತೆರವುಗೊಳಿಸಲಾಯಿತು.
ಕಳೆದ ದಿನದ ಹಿಂದೆ ಸ್ಥಳೀಯರು ಪರಿಸರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹೆಜ್ಜೆನು ಕಡಿತಕೊಳ್ಳಕಾಗಿ ತೊಂದರೆಯಾದ ಹಿನ್ನಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಉಲ್ಲಂಜೆ ಪರಿಸರದ ಯುವಶಕ್ತಿ ಫ್ರೆಂಡ್ಸ್ (ರಿ) ಉಲ್ಲಂಜೆ ಮತ್ತು ಕೊಡೆತ್ತೂರು ಬರ್ಕೆ ಫ್ರೆಂಡ್ಸ್( ರಿ)ಅಧ್ಯಕ್ಷ ಪದಾಧಿಕಾರಿಗಳು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಕೆ ಜಿ ಬೆಟ್ಟ ಬಳಿ ಭಂಡಾರ ಮನೆ ಬಳಿ ಹಲಸಿನ ಮರದ ತುದಿಯಲ್ಲಿ ಇದ್ದ ಬೃಹತ್ ಗಾತ್ರದ ಹೆಜ್ಜೇನು ಗೂಡನ್ನು ಬೆಂಕಿ ಕೊಟ್ಟು ತೆರವು ಗೊಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬರ್ಕೆ ಫ್ರೆಂಡ್ಸ್ ನ ಅಧ್ಯಕ್ಷ ಪ್ರೇಮ್ ರಾಜ್ ಶೆಟ್ಟಿ ,ರವಿ ರಾಜ್ ಶೆಟ್ಟಿ ಬಾಳಿಕೆ ಮನೆ, ದಯಾನಂದ ಶೆಟ್ಟಿ ಕೆ ,ಜಿ ಬೆಟ್ಟು ಮತ್ತಿತರರು ಇದ್ದರು.
Kshetra Samachara
10/10/2022 11:45 am