ಕೋಟ: ಕೋಟದ ಮೂಡುಗಿಳಿಯಾರು ಸಮೀಪ ಚಿರತೆಯೊಂದು ಸ್ಥಳೀಯರ ನಿದ್ದೆಗೆಡಿಸಿದೆ. ಇಲ್ಲಿನ ಸಣ್ಣ ಬಸವನಕಲ್ಲು ಪ್ರದೇಶದಲ್ಲಿ
ಶಾಲಾ ವಿದ್ಯಾರ್ಥಿಗಳು ಮನೆಗೆ ತೆರಳುವ ವೇಳೆ ಚಿರತೆ ಕಾಣಿಸಿಕೊಂಡಿದೆ.ಜನಸಂಚಾರ ಹೆಚ್ಚಿರುವ ರಸ್ತೆ ಪಕ್ಕದ ಪೊದೆಯ ಬಳಿ ಈ ಚಿರತೆ ಕಾಣಿಸಿಕೊಂಡಿದ್ದು ಆತಂಕ ಹೆಚ್ಚಲು ಕಾರಣವಾಗಿದೆ.
ಪೊದೆಯ ಹೊರಗೆ ನಿಂತಿದ್ದ ಚಿರತೆಯ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲವು ಸಮಯಗಳ ಹಿಂದೆ ಇದೇ ಪರಿಸರದಲ್ಲಿ ಚಿರತೆಯೊಂದು ಹಸುವಿನ ಮೇಲೆ ದಾಳಿ ಮಾಡಿತ್ತು. ಇದೀಗ ಚಿರತೆ ಪತ್ತೆಯಾದ ಕುರಿತು ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
PublicNext
26/08/2022 10:12 am