ಚಾರ್ಮಾಡಿ: ಮದ್ರಾಸ ಕೊಠಡಿಯಲ್ಲಿ ಬೃಹತ್ ಗಾತ್ರ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಅಲ್ಲಿನ ವ್ಯಕ್ತಿಯೊಬ್ರು ಮಸೀದಿಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗಮಿಸಿದ ಸ್ಥಳೀಯ ಉರಗ ತಜ್ಞರೊಬ್ರು ಮಸೀದಿಯೊಳಗೆ ಅವಿತುಕುಳಿತಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಮಲೆನಾಡಿನ ಭಾಗ, ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಗಳಲ್ಲಿ ಕಾಳಿಂಗ ಸರ್ಪ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅರಣ್ಯ ಪ್ರದೇಶದಲ್ಲಿ ವಾಸ ಮಾಡುವವರು ಎಚ್ಚರ ವಹಿಸಬೇಕಿದೆ.
Kshetra Samachara
22/08/2022 11:52 am