ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಕಲ್ಲುಗುಂಡಿ ಜಲಾವೃತ:ಅಂಗಡಿಗಳಿಗೆ, ಮನೆಗಳಿಗೆ ಮತ್ತೆ ನುಗ್ಗಿದ ನೀರು!

ಸುಳ್ಯ: ಭಾರೀ ಮಳೆಯಿಂದಾಗಿ ಪಯಸ್ವಿನಿ ಮತ್ತು ಇತರ ನದಿ ಹೊಳೆ ಉಕ್ಕಿ ಹರಿಯುತ್ತಿದ್ದು ಕಲ್ಲುಗುಂಡಿ ಪೇಟೆಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ.

ಮನೆಗಳಿಗೆ ಮತ್ತು ಅಂಗಡಿಗಳಿಗೆ ಮತ್ತೆ ನೀರು ನುಗ್ಗಿದೆ. ಕೆಸರು ಮಿಶ್ರಿತ ನೆರೆ ನೀರು ಮತ್ತೆ ಸಂಪಾಜೆ, ಕಲ್ಲುಗುಂಡಿ ಭಾಗವನ್ನು ಪೂರ್ಣವಾಗಿ ಕಲ್ಲುಗುಂಡಿ ಪೇಟೆಯಲ್ಲಿ ತುಂಬಿದ ನೀರು ಆಫೋಷನ ತೆಗೆದುಕೊಂಡಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಐದು ಅಡಿಗಿಂತಲೂ ಅಧಿಕ ನೀರು ಶೇಖರಣೆಯಾಗಿದೆ. ಕಲ್ಲುಗುಂಡಿ ಭಾಗಕ್ಕೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದು ಪ್ರದೇಶದಲ್ಲಿ ಕತ್ತಲು ಆವರಿಸಿದೆ. ಕಳೆದ ಎರಡು ಗಂಟೆಯಿಂದ ನಿರಂತರ ಮಳೆ ಸುರಿಯುತ್ತಿದ್ದು ಪಯಸ್ವಿನಿ ಮತ್ತು ಇತರ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು ನದೀ ಪಾತ್ರದ ಪ್ರದೇಶಗಳು ಜಲಾವೃತವಾಗಿದೆ. ಹಲವು ಮನೆಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ಮತ್ತು ಕೃಷಿ ಭೂಮಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ.

Edited By : Nagesh Gaonkar
Kshetra Samachara

Kshetra Samachara

03/08/2022 10:27 pm

Cinque Terre

20.41 K

Cinque Terre

0

ಸಂಬಂಧಿತ ಸುದ್ದಿ