ಕಾರ್ಕಳ: ಕಾರ್ಕಳ ತಾಲೂಕಿನ ತೆಳ್ಳಾರು ಗುಡ್ಡೆಯಂಗಡಿ ನಿವಾಸಿ ಉರಗತಜ್ಞ ಅನಿಲ್ ಪ್ರಭು ಅವರು ಹಾವು ಕಡಿತಕ್ಕೊಳಗಾಗಿ ಗಂಭೀರವಾಗಿ ಅಸ್ವಸ್ಥಗೊಂಡು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅನಿಲ್ ಪ್ರಭು ನಿನ್ಮೆ ತಮ್ಮ ಮನೆಯಲ್ಲಿ ಗಾಯಗೊಂಡಿದ್ದ ನಾಗರ ಹಾವಿನ ಆರೈಕೆ ಮಾಡುತ್ತಿದ್ದರು.ಈ ವೇಳೆ ಹಾವು ಅವರ ಕೈಗೆ ಕಡಿದಿದೆ. ತಕ್ಷಣ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಿದೆ ಎಂದು ತಿಳಿದುಬಂದಿದೆ.ಈ ಹಿಂದೆ ಆರೇಳು ಬಾರಿ ಅವರಿಗೆ ಹಾವು ಕಡಿದಿದ್ದರೂ ಪ್ತಾಣಾಪಾಯದಿಂದ ಪಾರಾಗಿದ್ದರು.
Kshetra Samachara
29/07/2022 02:21 pm