ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ:ಹವ್ಯಾಸಿ ಮೀನುಗಾರನಿಗೆ ಬಂಪರ್: ಭಾರೀ ಗಾತ್ರದ ಮೀನು ಬಲೆಗೆ!

ಮಲ್ಪೆ: ಮಲ್ಪೆ ಅರಬ್ಬೀ ಸಮುದ್ರದಲ್ಲಿ ಬೀಸಿದ ಗಾಳಕ್ಕೆ ಭಾರೀ ಗಾತ್ರದ ಎರಡು ಮೀನುಗಳು ಸಿಕ್ಕಿದ್ದು ಮತ್ಸ್ಯಪ್ರಿಯರ ಕುತೂಹಲಕ್ಕೆ ಕಾರಣವಾಗಿವೆ.

ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ನಾಗೇಶ್ ಉದ್ಯಾವರರಿಗೆ ಈ ಮೀನುಗಳು ಸಿಕ್ಕಿವೆ. ನಾಗೇಶ್ ಅವರು ಹವ್ಯಾಸಿ ಮೀನುಗಾರ.

ಇವತ್ತು ದೋಣಿಯಲ್ಲಿ ಹೋಗಿ ಮೀನಿಗೆ ಗಾಳ ಹಾಕಿದಾಗ ಬೃಹತ್ ಗಾತ್ರದ ಎರಡು ಮೀನುಗಳು ಇವರ ಗಾಳಕ್ಕೆ ಬಿದ್ದಿವೆ. 25 ಕೆ.ಜಿ ತೂಕದ ಮುರು ಮೀನು ಹಾಗೂ 15 ಕೆ.ಜಿ ತೂಕದ ಕೊಕ್ಕರ್ ಮೀನು ಇವಾಗಿದ್ದು, ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಲೆ ಬಾಳುತ್ತವೆ. ಈ ಮೀನುಗಳನ್ನು ನೋಡಲೆಂದೇ ಸಾಕಷ್ಟು ಜನ ಮಲ್ಪೆಯತ್ತ ಆಗಮಿಸಿದ್ದರು.

Edited By :
PublicNext

PublicNext

25/07/2022 04:49 pm

Cinque Terre

28.43 K

Cinque Terre

2

ಸಂಬಂಧಿತ ಸುದ್ದಿ