ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಲಪಾಡಿ: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಅಗತ್ಯ: ಡಾ.ಚೂಂತಾರು

ತಲಪಾಡಿ: ಶಾಲೆಯಲ್ಲಿ ಪಾಠ ಮಾಡುವುದರ ಜೊತೆಗೆ ಶಿಕ್ಷಕರು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಆರೋಗ್ಯ, ಕಾಳಜಿ, ಸಾಮಾಜಿಕ ಹೊಣೆಗಾರಿಕಿ ಮತ್ತು ಸಾಮಾನ್ಯ ಪ್ರಜ್ಞೆಗಳ ಬಗ್ಗೆಯೂ ಜಾಗೃತಿ ಮೂಡಿಸಬೇಕು. ಬರೀ ಪಾಠ ಹೇಳಿಕೊಡುವುದರಿಂದ ಮಕ್ಕಳ ಜ್ಞಾನ ವೃದ್ಧಿಯಾಗಬಹುದೇ ಹೊರತು ಅವರು ಪ್ರಜ್ಞಾವಂತ ನಾಗರಿಕರಾಗಲು ಸಾಧ್ಯವಿಲ್ಲ ಎಂದು ಡಾ.ಚೂಂತಾರು ಹೇಳಿದರು.

ಮಕ್ಕಳ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣವಾಗಲು ಪಠ್ಯದ ಜೊತೆಗೆ ಸಾಮಾಜಿಕ ಕಾಳಜಿ, ಸಾಮಾಜಿಕ ಬದ್ಧತೆ, ದೇಶಪ್ರೇಮ ಪರಿಸರ ಕಾಳಜಿ ಬೆಳೆಸುತ್ತದೆ. ಈಗಿನ ಕಾಲಘಟ್ಟದಲ್ಲಿ ಅತೀ ಅಗತ್ಯ ಎಂದು ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಹೇಳಿದರು ತಲಪಾಡಿ ಸಮೀಪದ ನಾರ್ಲಪಡಿಲ್ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಹಣ್ಣಿನ ಗಿಡಗಳನ್ನು ಚೂಂತಾರು ಸರೋಜಿನಿ ಪ್ರತಿಷ್ಠಾನದ ವತಿಯಿಂದ ವಿತರಿಸಿ ಮಾತನಾಡಿದರು.

ಈ ಸಂದರ್ಭ ಶಾಲಾ ಶಿಕ್ಷಕಿಯರಾದ ಇಂದಿರಾ.ಜಿ, ಯಶೋಧ, ವಿಧ್ಯಾ ಉಪಸ್ಥಿತರಿದ್ದರು. ಸುಮಾರು 65 ಮಕ್ಕಳು ಈ ವನಮಹೋತ್ಸವ ಮತ್ತು ಗಿಡ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

19/07/2022 07:32 pm

Cinque Terre

3.82 K

Cinque Terre

0

ಸಂಬಂಧಿತ ಸುದ್ದಿ