ಮುಲ್ಕಿ: ರಸ್ತೆ ಅವ್ಯವಸ್ಥೆಯಿಂದ ಕಂಗೆಟ್ಟಿರುವ ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಹಾಗೂ ನಡಿ ಕೊಪ್ಪಲು ಪ್ರದೇಶದಲ್ಲಿ ಭಾರಿ ಮಳೆಗೆ ನೆರೆ ಉಂಟಾಗಿದ್ದು ಮುಲ್ಕಿ-ಮಟ್ಟು ಸಂಪರ್ಕ ರಸ್ತೆ ಮುಳುಗಿದ್ದು ನಡಿ ಕೊಪ್ಪಲು ಪ್ರದೇಶ ದ್ವೀಪದಂತಾಗಿ ಜನಜೀವನಸ್ತವ್ಯಸ್ತಗೊಂಡಿದೆ.
ರಸ್ತೆ ಅವ್ಯವಸ್ಥೆಯಿಂದ ಕಂಗೆಟ್ಟಿರುವ ಮಟ್ಟು ಜನತೆಗೆ ಭಾರಿ ಮಳೆಯಿಂದ ತೀವ್ರ ತೊಂದರೆಯಾಗಿದ್ದು ಎಕ್ಕರೆಗಟ್ಟಲೆ ಕೃಷಿ ಹಾನಿ ಸಂಭವಿಸಿದೆ. ಅತಿಕಾರಿಬೆಟ್ಟು ಗ್ರಾ ಪಂ ಸದಸ್ಯ ದಯಾನಂದ ಮಟ್ಟು ಸ್ಥಳೀಯೊಡನೆ ಸೇರಿಕೊಂಡು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ನದಿ ಪ್ರದೇಶದ ಗ್ರಾಮಸ್ಥರಿಗೆ ಮುಂಜಾಗರೂಕತೆಯಿಂದ ಇರಲು ಸೂಚನೆ ನೀಡಲಾಗಿದೆ.
ಸುಮಾರು 24 ಕುಟುಂಬಗಳು ನೆಲೆಸಿರುವ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಕೊಪ್ಪಲು ಪ್ರದೇಶದಲ್ಲಿ ಭಾರಿ ಕೃಷಿ ಹಾನಿ ಸಂಭವಿಸಿದ್ದು ಮನೆಗೆ ನೆರೆ ನೀರು ನುಗ್ಗಿದ್ದು ದ್ವೀಪದಂತಾಗಿದೆ ಎಂದು ಸ್ಥಳೀಯರಾದ ವಸಂತ್ ಸುವರ್ಣ ಹೇಳಿದ್ದಾರೆ.
ಒಟ್ಟಾರೆಯಾಗಿ ಶನಿವಾರ ರಾತ್ರಿ ಸುರಿದ ಮಳೆ ಅತಿಕಾರಿ ಬೆಟ್ಟು ಗ್ರಾಮ ಹಾಗೂ ಮಾನಂಪಾಡಿ ಪ್ರದೇಶದಲ್ಲಿ ಅವಾಂತರವನ್ನೇ ಸೃಷ್ಟಿಸಿದೆ.
Kshetra Samachara
10/07/2022 05:05 pm