ಕುಂದಾಪುರ: ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ನಾಳೆಯಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಬೆಳಿಗ್ಗೆ ಭಾರೀ ಮಳೆ ಬಂದು ಬಳಿಕ ಅಬ್ಬರ ಕೊಂಚ ತಣ್ಣಗಾಗಿದೆ.
ಸತತ ಮಳೆಗೆ ಉಡುಪಿ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತ ಪ್ರಕರಣಗಳು ವರದಿಯಾಗುತ್ತಿವೆ. ಇವತ್ತು ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಮನೆಯೊಂದರ ಪಕ್ಕ ಗುಡ್ಡ ಕುಸಿತ ಉಂಟಾಗಿದೆ. ಮುದ್ರಾಡಿ ಹೇಮಣ್ಣ ಮೆಟ್ಟಕಲ್ಲು ಎಂಬುವರ ಮನೆ ಸಮೀಪ ಗುಡ್ಡ ಜರಿದಿದ್ದು, ಟಾರ್ಪಲ್ ಹೊದಿಕೆ ಹಾಕಿ ಗುಡ್ಡ ಕುಸಿಯದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ನಿನ್ನೆ ಕೂಡ ತಾಲೂಕಿನ ಹೈಕಾಡಿ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿತ್ತು.
Kshetra Samachara
09/07/2022 01:58 pm