ಉಡುಪಿ: ಜಿಲ್ಲೆಯಲ್ಲಿ ಜುಲೈ 1 ರಿಂದ ಇದುವರೆಗಿನ ವಾಡಿಕೆ ಮಳೆ 367 ಮಿ.ಮೀ ಆಗಿದ್ದು, ಇದುವರೆಗೆ 832 ಮಿ.ಮೀ ಮಳೆಯಾಗಿದೆ. 250 ಹೆಕ್ಟೇರ್ ನಷ್ಟು ಭತ್ತ ಬೆಳೆಗೆ ಹಾನಿಯಾಗಿದೆ. ನಗರ ಪ್ರದೇಶದಲ್ಲಿ 93 ಕಿಲೋಮೀಟರ್, ಗ್ರಾಮೀಣ ಭಾಗದ 685 ಕಿ.ಮೀ.ನಷ್ಟು ರಸ್ತೆ, ಜಿಲ್ಲಾ ಹಾಗೂ ರಾಜ್ಯಮಟ್ಟದ 7.5 ಕಿ.ಮೀ ಮುಖ್ಯ ರಸ್ತೆ ಹಾಳಾಗಿದ್ದು, 13 ಸೇತುವೆಗಳಿಗೆ ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ 1,515 ವಿದ್ಯುತ್ ಕಂಬಗಳು ಬಿದ್ದುಹೋಗಿವೆ. 47 ಕಿಲೋಮೀಟರ್‌ನಷ್ಟು ವಿದ್ಯುತ್ ತಂತಿಗಳು ಹಾಳಾಗಿದ್ದು, 64 ಮನೆಗಳಿಗೆ ಭಾಗಶಃ ಹಾನಿಯಾಗಿ ಒಟ್ಟು ಅಂದಾಜು 24.73 ಕೋಟಿಯಷ್ಟು ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ ಕೂಡ ನಿರಂತರವಾಗಿ ಮಳೆ ಮುಂದುವರೆದಿದ್ದು, ನಷ್ಟದ ನಿಖರ ಮೊತ್ತ ಮೌಲ್ಯ ಮಾಪನ ಮಾಡಲು ಅಸಾಧ್ಯವಾಗಿದ್ದು, ನಷ್ಟದ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ.
Kshetra Samachara
08/07/2022 10:07 pm