ಬಜಪೆ: ಸುರಿದಂತಹ ಭಾರೀ ಮಳೆಗೆ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಎಡಪದವು ಗ್ರಾಮದ ಬ್ರಿಂಡೆಲ ಎಂಬಲ್ಲಿ ಪಾಳು ಬಿದ್ದ ಕಲ್ಲಿನ ಕೋರೆಯ ನೀರು ತುಂಬಿ ಹರಿದ ಪರಿಣಾಮ ಸುಧಾಕರ್ ಎಂಬುವವರ ಮನೆಗೆ ನೀರು ನುಗ್ಗಿದೆ. ಅಲ್ಲದೆ ಸಮೀಪದ ನಾಲ್ಕು ಮನೆಗಳಿಗೆ ನೀರು ನುಗ್ಗುವಂತಹ ಸಂಭವ ವಿತ್ತು. ಸ್ಥಳೀಯರು ಸಮಸ್ಯೆಯ ಬಗ್ಗೆ ಪಂಚಾಯತ್ ಗೆ ಮಾಹಿತಿಯನ್ನು ನೀಡಿದ್ದಾರೆ.ಸ್ಥಳಕ್ಕೆ ಎಡಪದವು ಗ್ರಾಮ ಪಂಚಾಯತ್ ನ ಅಧ್ಯಕ್ಷ ಸುಕುಮಾರ್ ದೇವಾಡಿಗ,ಪಂಚಾಯತ್ ಪಿಡಿಓ ರಾಜೀವಿ ಡಿ ನಾಯ್ಕ ಹಾಗೂ ಸಂಬಂಧಪಟ್ಟ ವಾರ್ಡ್ ನ ಸದಸ್ಯರುಗಳು ಭೇಟಿ ನೀಡಿದ್ದಾರೆ.
ಜೆಸಿಬಿ ಮೂಲಕ ತಾತ್ಕಾಲೀಕವಾಗಿ ಚರಂಡಿ ವ್ಯವಸ್ಥೆಯನ್ನು ಮಾಡಿ ನೀರುಹರಿದು ಹೋಗುವಂತೆ ವ್ಯವಸ್ಥೆಯನ್ನು ಮಾಡಿದ್ದಾರೆ.ಗ್ರಾಮಸ್ಥರ ಸಮಸ್ಯೆಗೆ ಎಡಪದವು ಗ್ರಾಮ ಪಂಚಾಯತ್ ಕೂಡಲೇ ಸ್ಪಂದಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Kshetra Samachara
08/07/2022 11:12 am