ಉಡುಪಿ: ಜಿಲ್ಲೆಯಾದ್ಯಂತ ರಾತ್ರಿಯಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂದು ಮತ್ತು ನಾಳೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಶಾಲೆ- ಕಾಲೇಜುಗಳಿಗೆ ರಜೆ ಈಗಾಗಲೇ ಘೋಷಿಸಲಾಗಿದೆ.
ಭಾರೀ ಮಳೆಯಿಂದಾಗಿ ಕಚೇರಿಗಳಿಗೆ ಹೋಗುವವರು ಪರದಾಡಬೇಕಾಯಿತು. ವಾಹನ ಸವಾರರು ಮತ್ತು ಪಾದಚಾರಿಗಳ ಪಾಡು ಹೇಳತೀರದು. ಇನ್ನು ತಗ್ಗುಪ್ರದೇಶಗಳಲ್ಲಿ ನೆರೆ ನೀರು ನಿಂತು ಹಲವು ಮನೆಗಳು ಜಲಾವೃತಗೊಂಡಿವೆ. ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿವೆ.
ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಹಲವು ಗ್ರಾಮಗಳ ಸಂಪರ್ಕ ರಸ್ತೆ ಕಡಿತಗೊಂಡಿದೆ. ಒಟ್ಟಾರೆ ಮುಂಗಾರು ಅಬ್ಬರ, ಜನರ ನಿದ್ದೆಯನ್ನೇ ಕಸಿದು ಬಿಟ್ಟಿದೆ.
Kshetra Samachara
08/07/2022 11:08 am