ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರ-ಮಾಲಾಮೂಲೆ ಸಂಪರ್ಕ ರಸ್ತೆಯ ಸುತ್ತಮುತ್ತಲಿನ ಗ್ರಾಮಸ್ಥರು ಮಳೆಗಾಲದಲ್ಲಿ ಆತಂಕದಲ್ಲೇ ದಿನದೂಡುವಂತಾಗಿದೆ.
ವಿಟ್ಲ ಕಸಬಾ ಗ್ರಾಮದ ನೀರಕಣಿ, ಗಾಂಧಿನಗರ-ಮಾಲಮೂಲೆ ಸಂಪರ್ಕ ರಸ್ತೆಯ ಮಧ್ಯೆದಲ್ಲಿ ನೆಕ್ಕರೆಕಾಡು ಕಡೆಯಿಂದ ಬರುವ ನೀರು ಈ ತೋಡಿನ ಮೂಲಕ ಜೋಗಿಬೆಟ್ಟು ಕಡೆಯಿಂದ ನೇರವಾಗಿ ಕಡಂಬು ಹೊಳೆಯನ್ನು ಸೇರುತ್ತದೆ. ಮಳೆಗಾಲದಲ್ಲಿ ನೀರು ತುಂಬಿ ಹರಿಯುತ್ತಿದ್ದು, ವಿದ್ಯಾರ್ಥಿಗಳು, ಜನಸಾಮಾನ್ಯರು ಭಯದಲ್ಲೇ ತೋಡು ದಾಟುತ್ತಿದ್ದಾರೆ.
ಮಾಲಮೂಲೆ ಭಾಗದಲ್ಲಿ 15ಕ್ಕಿಂತಲೂ ಅಧಿಕ ಮನೆಗಳಿದ್ದು, ಈ ತೋಡು ಮೂಲಕವೇ ಜನರು ವಿಟ್ಲ ಪೇಟೆಗೆ ಆಗಮಿಸಬೇಕು. ತೋಡಿಗೆ ಅಡಿಕೆ ಮರಗಳನ್ನು ಹಾಕಲಾಗಿತ್ತು. ಆದರೆ ನೀರಿನ ಪ್ರವಾಹಕ್ಕೆ ಅದು ಕೊಚ್ಚಿಕೊಂಡು ಹೋಗಿದೆ.
ಈ ತೋಡಿಗೆ ಅಣೆಕಟ್ಟು ನಿರ್ಮಿಸಬೇಕಾಗಿ ಈ ಭಾಗದ ಜನರ ಬಹುವರ್ಷದ ಬೇಡಿಕೆಯಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ನೀಡಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.
PublicNext
07/07/2022 07:44 pm