ಬಜಪೆ:ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ.
ಸದ್ಯ ಭಾರೀ ಮಳೆಗೆ ಎಕ್ಕಾರು ನಳಿನಿ ನದಿಯು ತುಂಬಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿನ ಕೃಷಿ ಭೂಮಿಗಳು ಜಲಾವೃತ್ತವಾಗಿದೆ.
ಎಕ್ಕಾರು ತಾಂಗಾಡಿ ಬೈಲು,ಕಲ್ಲಟ್ಟ ಹಾಗೂ ಗಂಪದ ಬೈಲು ಸಮೀಪದ ಕೃಷಿ ಗದ್ದೆಗಳು ಜಲಾವೃತ್ತವಾಗಿದೆ.ಅಲ್ಲದೆ ಎಕ್ಕಾರು ಮೂಲಕ ಗಂಪದಬೈಲು,ಪದ್ಮಾವತಿ ನಗರ ಹಾಗೂ ಶಿಬರೂರಿಗೆ ಸಂಪರ್ಕ ಕಲ್ಪಿಸುವ ಕಾಲು ದಾರಿಯೂ ಮುಳುಗಡೆಯಾಗಿದೆ.
ಇದರಿಂದಾಗಿ ಈ ಭಾಗದ ಜನರ ದಿನ ನಿತ್ಯದ ಓಡಾಟಕ್ಕೆ ತೊಂದರೆಯಾಗಿದೆ.ಅಲ್ಲದೆ ಶಾಲಾ ಮಕ್ಕಳು ,ವೃದ್ದರು ಸೇರಿದಂತೆ ಮಳೆಗಾಲದ ಸಂದರ್ಭದಲ್ಲಂತೂ ನಡೆದುಕೊಂಡು ಹೋಗುವುದೇ ಕಷ್ಟಕರವಾಗಿದೆ.
ಮುಖ್ಯವಾಗಿ ನದಿಯ ಅಂಚುಗಳಿಗೆ ಎತ್ತರವಾದ ತಡೆಗೋಡೆ ಇಲ್ಲ.ಮಳೆಗಾಲದ ಸಂದರ್ಭದಲ್ಲಂತೂ ಈ ಭಾಗದ ಜನರ ಪಾಡು ಹೇಳ ತೀರದು.
ಗದ್ದೆಗಳಲ್ಲಿ ಮೂರು ಬೆಳೆಗಳನ್ನು ಬೆಳೆಯುತ್ತಿದ್ದು,ಮಳೆಗಾಲದ ಸಂದರ್ಭದಲ್ಲಂತೂ ಈ ಗದ್ದೆಗಳಲ್ಲಿ ಕೃಷಿಯನ್ನು ಮಾಡುವಂತಿಲ್ಲ ಎಂದು ಸ್ಥಳೀಯ ಕೃಷಿಕ ಭಾಸ್ಕರ ಮೂಲ್ಯ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.
Kshetra Samachara
07/07/2022 07:19 pm