ವರದಿ: ರಂಜಿತಾ ಮೂಡಬಿದಿರೆ
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತಿದ್ದು ಹಲವೆಡೆಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಕೆಲವರಿಗೆ ಪ್ರವಾಹ ನೋವು ತಂದರೆ ಇನ್ನು ಕೆಲವರಿಗೆ ಅನುಕೂಲವಾದ ಉದಾಹರಣೆಗಳು ಸಾಕ್ಷಿಕರಿಸಿದೆ.
ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಎಣ್ಣೆಹೊಳೆ ಬಳಿ ಡ್ಯಾಂ ಬಳಿ ಸ್ವರ್ಣೆ ಉಕ್ಕಿ ಹರಿಯುತಿದ್ದು ನದಿ ಪಾತ್ರದ ಬಳಿಯ ಪಂಪ್ ಹೌಸ್ ಬಳಿ ನೀರಿನ ಜೊತೆ ತೆಂಗಿನಕೈ ಅಡಿಕೆ ಮರದ ದಿಮ್ಮಿಗಳು ಶೇಖರಣೆ ಗೊಳ್ಳುತಿದ್ದು ಸ್ಥಳೀಯ ಹತ್ತು ಜನರ ತಂಡ ನೀರಿನಲ್ಲಿರುವ ವಸ್ತುಗಳನ್ನು ಹಿಡಿಯುವ ಸಾಹಸ ಮಾಡುತಿದ್ದಾರೆ.
ಉದ್ದ ದೋಟಿಗೆ ವೃತ್ತಾಕಾರದಲ್ಲಿ ಬಲೆಯನ್ನು ಕಟ್ಟಿ ಇನ್ನೂರಕ್ಕೂ ಹೆಚ್ಚು ತೆಂಗಿನ ಕಾಯಿ ಹಾಗೂ ಅಡಿಕೆ ಗಳನ್ನು ಹಿಡಿದಿದ್ದಾರೆ. ಉದ್ದ ಸರಳುಗಳನ್ನು ತೆಗೆದುಕೊಂಡು ತೇಲಿ ಬರುವ ಮರದ ದಿಮ್ಮಿಗಳನ್ನು ಸರಳುಗಳ ಮೂಲಕ ದಡಕ್ಕೆ ಎಳೆದು ಸಾಹಸ ಪ್ರದರ್ಶಿಸುತಿದ್ದಾರೆ.
ಅಪಾಯಕಾರಿ ಪ್ರವೃತ್ತಿ: ಮಾಳ ಕೆರುವಾಶೆ ಮುಂಡ್ಲಿ ಹೆರ್ಮುಂಡೆ ನಡುವೆ ಹರಿಯುವ ಸ್ವರ್ಣೆ ನದಿಪಾತ್ರದ ತೋಟಗಳಿಗೆ ನೀರು ನುಗ್ಗಿದ್ದು ತೆಂಗಿನಕಾಯಿ ಅಡಿಕೆ ಮರದ ದಿಮ್ಮಿಗಳನ್ನು ಹೊತ್ತುಕೊಂಡು ಬರುತ್ತಿವೆ. ನೀರು ವೇಗವಾಗಿ ಸಾಗುವಾಗ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ನೀರಿನ ಸೆಳೆತಕ್ಕೆ ಅಪಾಯಕ್ಕೆ ಸಿಲುಕುವ ಪ್ರಸಂಗಗಳು ಎದುರಾಗಬಹುದು. ಈ ಬಗ್ಗೆ ಸಂಬಂಧ ಜಿಲ್ಲಾಡಳಿತ ಗಮನವಹಿಸಬೇಕಾಗಿದೆ.
Kshetra Samachara
05/07/2022 10:05 pm