ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಂಜಾರು: ಮಳೆಯ ಅವಾಂತರ ಕುಸಿದ ಮನೆಗೊಡೆ

ಬಜಪೆ: ಕಳೆದ ಎರಡು ದಿನಗಳಿಂದ ಮಂಗಳೂರು ತಾಲೂಕಿನ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಎಡೆ ಬಿಡದೆ ಸುರಿದ ಭಾರೀ ಮಳೆಗೆ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು ಎಂಬಲ್ಲಿ ರಸ್ತೆಯಂಚಿನಲ್ಲಿನ ಮನೆಗಳ ಆವರಣ ಗೋಡೆಯು ಕುಸಿದು ರಾಜ್ಯ ಹೆದ್ದಾರಿಯ ಅಂಚಿಗೆ ಬಿದ್ದಿದೆ. ಆವರಣ ಗೋಡೆಯು ಕುಸಿದು ಬಿದ್ದ ಪರಿಣಾಮ ಕೆಂಜಾರು ಬಂಡಸಾಲೆಯ ಹತ್ತು ಮನೆಗಳು ಅಪಾಯದ ಅಂಚಿನಲ್ಲಿದೆ.

ಆವರಣ ಗೋಡೆಯು ಕುಸಿದ ರಾಜ್ಯ ಹೆದ್ದಾರಿಯ ಬಳಿಯೇ ಬಸ್ಸು ತಂಗುದಾಣ ಕೂಡ ಇದ್ದು, ಮೇಲ್ಚಾವಣೆಯ ಅಂಚಿಗೆ ಹಾನಿಯಾಗಿದೆ. ಸ್ಥಳಕ್ಕೆ ಬಜಪೆ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Manjunath H D
Kshetra Samachara

Kshetra Samachara

30/06/2022 07:08 pm

Cinque Terre

5.87 K

Cinque Terre

0

ಸಂಬಂಧಿತ ಸುದ್ದಿ