ಮಂಗಳೂರು: ಮುಂಗಾರು ಆರಂಭದ ಬಳಿಕ ಮೊದಲ ಬಾರಿಗೆ ಮಂಗಳೂರಿನಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ನಿನ್ನೆ ರಾತ್ರಿಯಿಂದಲೇ ಮಳೆಯ ಅಬ್ಬರ ಹೆಚ್ಚಾಗಿದ್ದು, ಇಂದೂ ಮುಂದುವರಿದಿದೆ. ಇಂದು ದ.ಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.
ಮುಂಗಾರು ಕ್ಷೀಣಿಸಿದ ಪರಿಣಾಮ ಮಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಸಾಧಾರಣ ಪ್ರಮಾಣದ ಬಿಸಿಲು ಕಂಡು ಬರುತ್ತಿತ್ತು. ಆದರೆ ನಿನ್ನೆ ರಾತ್ರಿಯಿಂದಲೇ ಮಳೆಯ ಅಬ್ಬರ ಹೆಚ್ಚಾಗಿದ್ದು, ಇಂದೂ ಕೂಡಾ ಬಿರುಸಿನ ಮಳೆ ಬರುತ್ತಿದೆ. ದಟ್ಟವಾದ ಮೋಡ ಆವರಿಸಿದ್ದು, ಮಳೆಯು ಇಡೀ ದಿನ ಮುಂದುವರಿಯುವ ಲಕ್ಷಣ ಗೋಚರವಾಗುತ್ತಿದೆ.
ಬೆಳಗ್ಗಿನಿಂದಲೇ ಮಳೆಯು ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಕೆಲಸಕ್ಕೆ ಹೋಗುವವರು, ಶಾಲೆಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಕೆಲವೆಡೆ ನೀರು ನುಗ್ಗಿ ತೊಂದರೆ ಅನುಭವಿಸಿದ್ದಾರೆ.
Kshetra Samachara
30/06/2022 09:58 am