ಸುಳ್ಯ: ಜೂನ್ 28ರಂದು ಬೆಳಿಗ್ಗೆ 7:45ರ ಸುಮಾರಿಗೆ ಲಘು ಭೂಕಂಪನಕ್ಕೆ ತುತ್ತಾಗಿದ್ದ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಸಂಜೆ ಮತ್ತೆ ಭೂಮಿ ಅದುರಿದ ಅನುಭವವಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿಕೊಂಡಿದ್ದಾರೆ. ರಿಕ್ಷರ್ ಮಾಫಕದಲ್ಲಿ 3.0 ತೀವ್ರತೆಯುಳ್ಳ ಭೂ ಕಂಪನ ಬೆಳಿಗ್ಗೆ ಸಂಭವಿಸಿತ್ತು. ಸಂಜೆ ಭೂಮಿ ಕಂಪಿಸಿದ ಅನುಭವ ಸ್ಥಳೀಯ ಜನತೆಗಾಗಿದ್ದರೂ ಬೆಳಿಗ್ಗೆಯಷ್ಟು ತೀವ್ರತೆಯಿಂದ ಕೂಡಿರಲಿಲ್ಲ ಎಂದು ಹೇಳಲಾಗುತ್ತಿದೆ.
ಸಂಪಾಜೆ ಭಾಗದಲ್ಲಿ ಇಂದು ಸಂಜೆ 4:40ರ ಸುಮಾರಿಗೆ ಭೂಮಿ ಕಂಪಿಸಿದೆ.
Kshetra Samachara
28/06/2022 10:57 pm