ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಪುರಾತನ ಕಾಲದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆ!

ಕುಂದಾಪುರ: ಪುರಾತನ ಕಾಲದಲ್ಲಿ ಬಳಸಲಾಗುತ್ತಿದ್ದ, ಆನೆ ನೀರು ಕುಡಿಯುವ ಕೊಪ್ಪರಿಗೆ ಹಾಗೂ ಆನೆ ಕಟ್ಟುವ ಕಲ್ಲಿನ ಕಂಬ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ಪತ್ತೆಯಾಗಿವೆ.‌

100 ವರ್ಷಗಳಿಗೂ ಹಿಂದಿನ ಕಾಲದ ರಾಜರ ಆನೆ ಕಟ್ಟುವ ಕಲ್ಲಿನ ಕಂಬ ಹಾಗೂ ಆನೆಗೆ ನೀರು ಕುಡಿಯಲು ನಿರ್ಮಿಸಿದ ಕಲ್ಲಿನ‌ ಕೊಪ್ಪರಿಗೆ ಇವು ಎನ್ನಲಾಗಿದೆ. ಆನೆ ಕಟ್ಟುವ ಕಂಬ ಮೊದಲಿನಿಂದಲೂ ಇಲ್ಲಿ ರಸ್ತೆ ಬದಿ, ಕಾಣಿಸುತ್ತಿತ್ತು. ಕೊಪ್ಪರಿಗೆ ಹಿಂದೆ ಮಣ್ಣಿನ ಅಡಿಯಲ್ಲಿ ಹೂತು ಹೋಗಿ ಕಾಣಿಸುತ್ತಿರಲಿಲ್ಲ. ಇಲ್ಲಿ ಆ ಕೊಪ್ಪರಿಗೆ ಇತ್ತು ಎಂಬ ಮಾತನ್ನು ಕೇಳಿದ ಇಲ್ಲಿನ ವಿದ್ಯಾರ್ಥಿಗಳಾದ ಸುಹಾಸ್ ಮಲ್ಯ, ಸಮರ್ಥ, ರಿತೀಶ್ ಹಾಗೂ ಅನ್ವಿತ್ ಮಲ್ಯ ಅವರು ಆಸಕ್ತಿಯಿಂದ ಅದನ್ನು ಹುಡುಕಿ, ಹೊರಗೆ ತೆಗೆದಿದ್ದಾರೆ. ಕೆಳದಿ ಶಿವಪ್ಪ ನಾಯಕನ ಕಾಲದ ಹೊನ್ನಯ್ಯ ಅರಸ ಮನೆತನದವರು ಆಳ್ವಿಕೆ ನಡೆಸಿದ್ದು, ಇದು ಅವರ ಕಾಲದ್ದೇ ಇರಬಹುದು ಎಂದು ಹೇಳಲಾಗುತ್ತಿದೆ.

Edited By : Vijay Kumar
Kshetra Samachara

Kshetra Samachara

24/06/2022 04:39 pm

Cinque Terre

3.79 K

Cinque Terre

0

ಸಂಬಂಧಿತ ಸುದ್ದಿ