ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕುಂದಾಪುರ ಮಾಜಿ ತಾಲೂಕು ಪಂಚಾಯತ್ ಸದಸ್ಯ ಟಿ.ಕೆ.ಕೋಟ್ಯಾನ್ ನಿಧನ

ಕುಂದಾಪುರ: ಕುಂದಾಪುರ ಮಾಜಿ ತಾಲೂಕು ಪಂಚಾಯತ್ ಸದಸ್ಯ, ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಟಿ.ಕೆ.ಕೋಟ್ಯಾನ್ (50) ಅವರು ಹೃದಯಾಘಾತದಿಂದ ಶುಕ್ರವಾರ ಮುಂಜಾನೆ ವೇಳೆಗೆ ತಲ್ಲೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ತಲ್ಲೂರು ಚಿಕ್ಕುಮನೆ ನಿವಾಸಿಯಾಗಿರುವ ತಲ್ಲೂರು ಕೋಟಿ ಕೋಟ್ಯಾನ್ ಈ ಭಾಗದಲ್ಲಿ ಟಿ.ಕೆ. ಕೋಟ್ಯಾನ್ ಎಂದು ಕರೆಯಲ್ಪಡುತ್ತಿದ್ದರು. ಬಿ.ಕಾಂ ಪದವಿಧರರಾದ ಇವರು ಸಹಕಾರಿ ಸಂಘದಲ್ಲಿ ಉದ್ಯೋಗ ಆರಂಭಿಸಿದ್ದು ಇದೀಗ ತಲ್ಲೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ

ದಲ್ಲಿ ಸಹಾಯಕ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾಗಿ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದ ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಮಾಜಿ ಶಾಸಕ ಕೆ.ಗೋಪಾಲ್ ಪೂಜಾರಿ ಅವರಿಗೆ ನಿಕಟವರ್ತಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

17/06/2022 02:17 pm

Cinque Terre

16.31 K

Cinque Terre

0

ಸಂಬಂಧಿತ ಸುದ್ದಿ