ಮಂಗಳೂರು: ಶಿಶಿಲದ ಪ್ರಖ್ಯಾತ ಶಿಶಿಲೇಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿನ ಮೀನುಗಳಿಗೆ ನೀರು ನಾಯಿಗಳ ಕಾಟ ಎದುರಾಗಿದೆ. ಪರಿಣಾಮ ದೇವರ ಮೀನುಗಳ ರಕ್ಷಣೆ ತಲೆನೋವಾಗಿ ಪರಿಣಮಿಸಿದೆ.ಕಳೆದೆರಡು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ವಿವಿಧೆಡೆಗಳಲ್ಲಿ ನೀರುನಾಯಿಗಳ ಹಾವಳಿ ಆರಂಭವಾಗಿದೆ. ಈ ನೀರುನಾಯಿಗಳಿಗೆ ಮೀನು, ಕಪ್ಪೆ ಮುಂತಾದ ಜಲಚರಗಳೇ ಆಹಾರ.
ನೀರುನಾಯಿಗಳು ನದಿ, ನೀರಿನ ತಾಣ, ಬಂಡೆಗಳ ಪೊಟರೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಶಿಶಿಲೇಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿ ಯಥೇಚ್ಛವಾಗಿ ಬೃಹತ್ ಗಾತ್ರದ ಮೀನುಗಳು ಕಂಡು ಬರುತ್ತವೆ. ಇವುಗಳು ದೇವರ ಮೀನುಗಳೆಂದೇ ಪ್ರಖ್ಯಾತವಾಗಿದೆ. ಆದ್ದರಿಂದ ಇಲ್ಲಿ ಸುಲಭವಾಗಿ ಮೀನುಗಳು ನೀರುನಾಯಿಗಳು ಲಭ್ಯವಾಗುತ್ತದೆ. ಆದ್ದರಿಂದ ಇಲ್ಲಿ ಅವುಗಳ ಹಾವಳಿ ಆರಂಭವಾಗಿದೆ.
ಶಿಶಿಲದಲ್ಲಿ ಮೀನು ಹಿಡಿಯುವುದು ನಿಷಿದ್ಧ. ಅಲ್ಲದೆ ನೀರುನಾಯಿಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳು. ಇವುಗಳಿಗೆ ನದಿ ತೀರದ ಪೊಟರೆ, ಪೊದೆಗಳೇ ಆವಾಸಸ್ಥಾನ. ಜಲಜೀವಿಗಳೇ ಅವುಗಳ ಆಹಾರ. ಅವುಗಳನ್ನು ಹಿಡಿಯುವಂತೆಯೂ ಇಲ್ಲ. ಬೇರೆಡೆಗೆ ಬಿಡುವಂತೆಯೂ ಇಲ್ಲ. ಆದ್ದರಿಂದ ಅರಣ್ಯ ಇಲಾಖೆಗೆ ದೇವರ ಮೀನಿನ ರಕ್ಷಣೆ ಹಾಗೂ ಇವುಗಳನ್ನು ಭಕ್ಷಣೆ ಮಾಡುವ ನೀರುನಾಯಿಗಳ ಉಳಿವಿನ ಅನಿವಾರ್ಯತೆಯೂ ಇದೆ. ಆದ್ದರಿಂದ ಅರಣ್ಯ ಇಲಾಖೆ ಈಗ ತಲೆನೋವು ಶುರುವಾಗಿದೆ.
Kshetra Samachara
29/05/2022 12:23 pm