ಬಜಪೆ: ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಸುಲಪದವಿನಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು,ಗ್ರಾಮಸ್ಥರನ್ನು ಭಯಭೀತಗೊಳಿಸಿದೆ.
ಸ್ಥಳೀಯರೊಬ್ಬರು ಕಾರಿನಲ್ಲಿ ಹೋಗುತ್ತಿದ್ದಾಗ ಎಕ್ಕಾರಿನ ಅರಸುಲ ಪದವು ಎಂಬಲ್ಲಿ ಹುಲ್ಲಿನ ಪೊದೆಯಲ್ಲಿ ಎರಡು ಚಿರತೆಗಳು ಕಂಡುಬಂದಿದೆ.ಹುಲ್ಲಿನ ಪೊದೆಯಲ್ಲಿನ ಚಿರತೆಯ ಚಲನವಲನಗಳನ್ನು ತಮ್ಮ ಮೊಬೈಲ್ ನಲ್ಲಿ ಚತ್ರೀಕರಿಸಿದ್ದಾರೆ.ಎಕ್ಕಾರು ಅರಸುಲಪದವಿನಲ್ಲಿ ಈ ಹಿಂದೆ ಕೂಡ ಚಿರತೆಯ ಉಪಟಳವಿತ್ತು.
ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಪ್ರದೇಶದಲ್ಲಿ ಬೋನುಗಳನ್ನು ಇಟ್ಟಿದ್ದಾರೆ.ತದನಂತರ ಚಿರತೆಗಳು ಕಂಡುಬರಲಿಲ್ಲ.ಇದೀಗ ಮತ್ತೆ ಚಿರತೆ ಪ್ರತ್ಯಕ್ಷಗೊಂಡಿದ್ದರಿಂದ ದಿನಂಪ್ರತಿ ಕೆಲಸಬಿಟ್ಟು ಮನೆ ಕಡೆಗೆ ಹೋಗುವಂತಹ ಜನರನ್ನು ಭಯಭೀತರನ್ನಾಗಿಸಿದೆ.
Kshetra Samachara
09/05/2022 09:09 pm