ಸುಳ್ಯ : ಭಾರಿ ಗಾಳಿ ಮಳೆಗೆ ಪಂಜ ಪರಿಸರದಲ್ಲಿ ಅಪಾರ ಹಾನಿ ಸಂಭವಿಸಿದೆ. ಏ.30 ರ ರಾತ್ರಿ ಸುರಿದ ಮಳೆಗೆ ರಾತ್ರಿ ಬಾರಿ ಗಾಳಿ ಮಳೆಗೆ ಅನೇಕ ಕಡೆ ಮನೆಗಳ ಮೇಲೆ ಮರ ಉರುಳಿ ಹಾನಿಯಾಗಿದೆ. ಕೃಷಿ ನಷ್ಟವಾಗಿದೆ ಇನ್ನು ಮರ ಬಿದ್ದ ಪರಿಣಾಮ ಅನೇಕ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಪಂಜ ಬಳ್ಳಕ ರಸ್ತೆ ಮತ್ತು ಅನೇಕ ಕಡೆ ರಸ್ತೆ ಮೇಲೆ ಉರಳಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು.
ಕೂತ್ಕಂಜ ಗ್ರಾಮದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.ನಾಗತೀರ್ಥ ಶೇಷಪ್ಪ ರವರ ಮನೆ ಮೇಲೆ ತೆಂಗಿನ ಮರ ಉರುಳಿ ಹಾನಿಯಾಗಿದೆ.ನಾಗತೀರ್ಥ ವಿಮಲಾರವರ ,ನಾಗತೀರ್ಥ ಮೋನಪ್ಪ ಮೂಲ್ಯರ ಮನೆಗಳಿಗೆ ಹಾನಿಯಾಗಿದೆ. ಬಿಳಿಮಲೆ ವಸಂತ ರವರ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದಿದ್ದು ಅಪಾರ ಹಾನಿಯಾಗಿದೆ.ಬಿಳಿಮಲೆ ಯತಿರಾಜ ರವರ ಮನೆ ಮುಂಭಾಗಕ್ಕೆ ಅಡಿಕೆ ಮರ ಬಿದ್ದು ಹಾನಿಯಾಗಿದೆ.
ಬಿಲಿಮಲೆ ತೀರ್ಥೇಶ್ ರವರ ಕೊಟ್ಟಿಗೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.ಮತ್ತು ಕೃಷಿ ತೋಟಗಳಲ್ಲಿ ತೆಂಗಿನ ಮರ ಮತ್ತು ಅಡಿಕೆ ಮರ ಧರೆಗೆ ಉರುಳಿದ್ದು ಕೃಷಿಕರಿಗೆ ಅಪಾರ ನಷ್ಟ ಉಂಟು ಮಾಡಿದೆ.ಬಿಳಿಮಲೆ ಈಶ್ವರ ಗೌಡರ ತೋಟದಲ್ಲಿ ಕೃಷಿಗೆ ಹಾನಿ ಸಂಭವಿಸಿದೆ ಸ್ಥಳಕ್ಕೆ ಕಂದಾಯ ಇಲಾಖೆಯವರು, ಗ್ರಾಮ ಪಂಚಾಯತ್ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
01/05/2022 07:55 pm