ಕಾಪು : ಕಾಪು ತಾಲೂಕಿನ ಹಲವೆಡೆ ಬುಧವಾರ ರಾತ್ರಿ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ.
ಕಾಪು ತಾಲೂಕಿನ ಪಡುಬಿದ್ರಿ,ಉಚ್ಚಿಲ, ಶಿರ್ವ ಸಹಿತ ಹಲವೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ.
ಮಳೆಯಬ್ಬರಕ್ಕೆ ವಿದ್ಯುತ್ ಕೈಕೊಟ್ಟು ಬಹುತೇಕ ಕಡೆಗಳಲ್ಲಿ ಕತ್ತಲು ಉಂಟಾಗಿದೆ. ಕೆಲವೆಡೆ ಮಳೆ ನೀರು ಹರಿವ ತೋಡುಗಳು ಮುಚ್ಚಿ ಹೋಗಿದ್ದು ಮಳೆ ನೀರು ರಸ್ತೆಯಲ್ಲೇ ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
Kshetra Samachara
14/04/2022 08:57 am