ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಭಾರೀ ಗಾಳಿ ಮಳೆಗೆ ಕುಸಿದ ಕಲ್ಲುಗಳ ರಾಶಿ: ಐದು ಬೈಕ್‌ಗಳು ಜಖಂ

ವಿಟ್ಲ: ಭಾರೀ ಮಳೆಗಾಳಿಗೆ ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್‌ನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಟ್ಟಡದಿಂದ ಕಲ್ಲುಗಳು ಬಿದ್ದು ಹಲವು ವಾಹನಗಳು ಹಾನಿಗೊಂಡ ಘಟನೆ ನಡೆದಿದೆ.

ವಿಟ್ಲದಲ್ಲಿ ಇಂದು ಸಂಜೆ ವೇಳೆ ಭಾರೀ ಬಿರುಗಾಳಿ ಸಹಿತ ಮಳೆ ಸುರಿದಿತ್ತು. ವಿ.ಎಚ್ ಕಾಂಪ್ಲೆಕ್ಸ್‌ನಲ್ಲಿ ಅಂಗಡಿ ಮಳಿಗೆಗಳ ಮುಂಭಾಗದ ಪಾರ್ಕಿಂಗ್‌ನಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಪಾರ್ಕಿಂಗ್‌ನ ಮೇಲ್ಭಾಗಕ್ಕೆ ಬಿಸಿಲು ಬಾರದಂತೆ ಹಳದಿ ಬಟ್ಟೆಯ ಚಪ್ಪರಕ್ಕೆ ಅಳವಡಿಸಲಾಗಿದ್ದ ಹೋಲೊ ಬ್ಲಾಕ್ ಕಲ್ಲುಗಳ ರಾಶಿ ಗಾಳಿಗೆ ಕೆಳಗಡೆ ಕುಸಿದಿದೆ. ಇದರಿಂದ ಸುಮಾರು ಐದು ದ್ವಿಚಕ್ರ ವಾಹನಗಳು ಹಾನಿಗೊಂಡಿದೆ. ಸ್ಥಳದಲ್ಲಿ ಜನರು ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.

Edited By : Nagesh Gaonkar
Kshetra Samachara

Kshetra Samachara

13/04/2022 10:49 pm

Cinque Terre

7.42 K

Cinque Terre

0

ಸಂಬಂಧಿತ ಸುದ್ದಿ