ಕೋಡಿ: ಕೋಡಿ ಭಾಗದಲ್ಲಿ ಕಡಲಾಮೆ ಮೊಟ್ಟೆಗಳು ಪತ್ತೆಯಾಗುತ್ತಿದ್ದು, ಅವುಗಳನ್ನು ಸಂರಕ್ಷಿಸಿಡುವುದೇ ಸವಾಲಾಗಿ ಪರಿಣಮಿಸಿದೆ.
ಕೋಡಿ ಭಾಗದಲ್ಲಿನ ಲೈಟ್ ಹೌಸ್ ಬಳಿ ಈ ಹಿಂದೆ ಪತ್ತೆಯಾಗಿದ್ದ ಕಡಲಾಮೆ ಮೊಟ್ಟೆಗಳನ್ನು ಅರಣ್ಯ ಇಲಾಖೆ, ಎಫ್‌ಎಸ್‌ಎಲ್ ಇಂಡಿಯಾ ಮತ್ತು ಸ್ಥಳೀಯ ಮೀನುಗಾರರು ಸಂರಕ್ಷಣೆ ಮಾಡಿದ್ದರು. ಹೀಗೆ ಸಂರಕ್ಷಿಸಲ್ಪಟ್ಟ ಮೊಟ್ಟೆಗಳಿಂದ ಒಂದೊಂದಾಗಿ ಮರಿಗಳು ಹೊರ ಬರುತ್ತಿವೆ. ಆಲೀವ್ ರಿಡ್ಲಿ ಜಾತಿಗೆ ಸೇರಿದ 74 ಕಡಲಾಮೆ ಮರಿಗಳನ್ನು ಸುರಕ್ಷೀತವಾಗಿ ಸಮುದ್ರಕ್ಕೆ ಬಿಡಲಾಯಿತು.
ಈ ಬೆನ್ನಲ್ಲೇ ಕೋಡಿ ಸೀತಾರಾಮ ಭಜನ ಮಂದಿರದ ಬಳಿ ಇನ್ನಷ್ಟು ಕಡಲಾಮೆ ಮೊಟ್ಟೆಗಳು ಪತ್ತೆಯಾಗಿವೆ. ಅರಣ್ಯ ಇಲಾಖೆಯ ಜೊತೆಗೆ ವಿವಿಧ ಸಂಸ್ಥೆಗಳು ಕಡಲಾಮೆ ಮೊಟ್ಟೆಯನ್ನು ಸಂರಕ್ಷಿಸಿ ಗೂಡಿಗೆ ರಕ್ಷಣೆ ಒದಗಿಸಿವೆ.
Kshetra Samachara
15/02/2022 09:56 am