ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಕೆರೆಗೆ ಬಿದ್ದ ಕಾಡುಕೋಣ: ಜೆಸಿಬಿಯಿಂದ ಮೇಲಕ್ಕೆತ್ತಿದ ಅರಣ್ಯ ಇಲಾಖೆ ಸಿಬ್ಬಂದಿ!

ಹೆಬ್ರಿ: ಕೆರೆಗೆ ಬಿದ್ದು ಮೇಲೆ ಬರುವುದಕ್ಕಾಗದೇ ಒದ್ದಾಡುತ್ತಿದ್ದ ಕಾಡುಕೋಣವನ್ನು ಜೆಸಿಬಿ ಬಳಸಿ ಮೇಲಕ್ಕೆತ್ತಿದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ. ಶಿವಪುರ ಒಳಬೈಲು ಸುರೇಶ್ ಎಂಬವರ ಜಾಗದಲ್ಲಿ ಇದ್ದ, ಕೆರೆಗೆ ಕಾಡುಕೋಣವೊಂದು ಬಿದ್ದು ಮೇಲೆ ಬರುವುದಕ್ಕೆ ಒದ್ದಾಡುತ್ತಿತ್ತು.ಇದನ್ನು ಗಮನಿಸಿದ ಸುರೇಶ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಜೆಸಿಬಿ ಬಳಸಿ ಕಾಡುಕೋಣವನ್ನು ಮೇಲಕ್ಕೆತ್ತಿದ್ದಾರೆ.ಮೇಲಕ್ಕೆ ಬಂದ ಕಾಡುಕೋಣ ಒಮ್ಮೆ ತಿರುಗಿ ಜೇಸಿಬಿ ಚಾಲಕನನ್ನು ದುರುಗುಟ್ಟಿ ನೋಡುತ್ತಾ ಬದುಕಿದೆಯಾ ಬಡಜೀವವೇ ಎಂದುಕೊಂಡು ಕಾಡಿನತ್ತ ಹೆಜ್ಜೆ ಹಾಕಿತು!

Edited By : Nagesh Gaonkar
Kshetra Samachara

Kshetra Samachara

28/12/2021 09:53 pm

Cinque Terre

9.39 K

Cinque Terre

2

ಸಂಬಂಧಿತ ಸುದ್ದಿ