ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಪಂಚಾಯತ್ ವ್ಯಾಪ್ತಿಯ ಪೊಂಪೈ ಕಾಲೇಜು ಬಳಿಯ ರಾಜ್ಯ ಹೆದ್ದಾರಿಯಲ್ಲಿ ಚಿರತೆ ಪತ್ತೆಯಾಗಿದೆ!
ಕಳೆದ ರಾತ್ರಿ ಸ್ಥಳೀಯರು ವಾಹನದ ಮೂಲಕ ಸಂಚರಿಸುವಾಗ ಚಿರತೆ ಮುಖ್ಯ ರಸ್ತೆಯಿಂದ ಒಳ ರಸ್ತೆಗೆ ಹೋಗುತ್ತಿತ್ತು. ಈ ಸಂದರ್ಭ ವಾಹನ ಚಾಲಕ ಚಿರತೆ ಓಡಾಡುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಕಿನ್ನಿಗೋಳಿ, ಮುಲ್ಕಿ ಪರಿಸರದಲ್ಲಿ ಕಾಣ ಸಿಕ್ಕಿ, ಬಳಿಕ ನಾಪತ್ತೆಯಾಗಿದ್ದ ಚಿರತೆ ಮತ್ತೆ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆಯನ್ನು ಹಿಡಿಯಲು ಕಾರ್ಯ ಪ್ರವೃತ್ತರಾಗುವಂತೆ ಒತ್ತಾಯಿಸಿದ್ದಾರೆ.
Kshetra Samachara
28/11/2021 10:01 am