ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದು ಕೆಲಕಡೆ ಕೃತಕ ನೆರೆ ಭೀತಿ ಎದುರಾಗಿದೆ.
ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆಂಪುಗುಡ್ಡೆ ಮಾಧವ ಪೂಜಾರಿ ಎಂಬವರ ಗ್ಯಾರೇಜ್ ಗೆ ಕೆಸರು ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಈ ಪರಿಸರದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಉಂಟಾಗಿದೆ ಎಂದು ಮಾಧವ ಪೂಜಾರಿ ಆರೋಪಿಸಿದ್ದಾರೆ.
ಚರಂಡಿ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಸ್ಥಳೀಯ ನಪಂ ಸದಸ್ಯೆ ವಂದನ ಕಾಮತ್ ರವರಿಗೆ ತಿಳಿಸಿದರು ಸಾಧನೆ ಶೂನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಲ್ಕಿ ತಾಲೂಕು ವ್ಯಾಪ್ತಿಯ ಅತಿಕಾರಿಬೆಟ್ಟು, ಕುಬೆವೂರು, ಕಿನ್ನಿಗೋಳಿ-ಕಟೀಲು ಹಳೆಯಂಗಡಿ, ಪಕ್ಷಿಕೆರೆ, ಬಳ್ಕುಂಜೆ, ಪಡುಪಣಂಬೂರು ಗ್ರಾಮದ ತಗ್ಗುಪ್ರದೇಶಗಳು ಭಾರಿ ಮಳೆಗೆ ಜಲಾವೃತವಾಗಿದೆ.
ಮಳೆ ಸಿಡಿಲಿಗೆ ವಿದ್ಯುತ್ ವ್ಯತ್ಯಯವಾಗಿದ್ದು ಕೆಲಕಡೆ ಅಲ್ಪಸ್ವಲ್ಪ ಹಾನಿ ಸಂಭವಿಸಿದೆ.
ಮುಲ್ಕಿ ಹಳೆಯಂಗಡಿ ಪರಿಸರದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ಭಾರಿ ಮಳೆಗೆ ಕೃತಕ ನೆರೆ ಉಂಟಾಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ.
Kshetra Samachara
14/11/2021 09:46 pm